ETV Bharat / state

ಚಿರತೆ ದಾಳಿಗೆ ಕರು ಬಲಿ: ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ - ಕೋಲಾರ ಜಿಲ್ಲೆಯಲ್ಲಿ ಚಿರತೆ ದಾಳಿ

ಮುಳಬಾಗಿಲು ತಾಲೂಕಿನ ದೇವರಾಯಸಮುದ್ರ ಗ್ರಾಮದ ಬೆಟ್ಟದ ತಪ್ಪಲಲ್ಲಿ ಹುಲ್ಲು ಮೇಯಲು ಹೋದಾಗ ಕರು ಮೇಲೆ ಚಿರತೆ ದಾಳಿ ಮಾಡಿದ್ದು ಕೊಂದು ಹಾಕಿದೆ.

leopard attack in kolar district
ಚಿರತೆ ದಾಳಿಗೆ ಕರು ಬಲಿ
author img

By

Published : Jun 12, 2020, 4:00 PM IST

ಕೋಲಾರ: ಚಿರತೆ ದಾಳಿಗೆ ಕರು ಬಲಿಯಾಗಿದ್ದು, ಗ್ರಾಮಸ್ಥರು ಆತಂಕಕ್ಕೊಳಗಾಗಿರುವ ಘಟ‌ನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.

ಮುಳಬಾಗಿಲು ತಾಲೂಕಿನ ದೇವರಾಯಸಮುದ್ರ ಗ್ರಾಮದ ಬೆಟ್ಟದ ತಪ್ಪಲಲ್ಲಿ ಈ ಘಟನೆ ಜರುಗಿದೆ. ಗ್ರಾಮದ ಬಳಿ ಇರುವ ಬೆಟ್ಟದಲ್ಲಿ ಹುಲ್ಲು ಮೇಯಲು ಹೋದ ಸಂದರ್ಭದಲ್ಲಿ ಚಿರತೆ ಕರುವಿನ ಮೇಲೆ ದಾಳಿ ಮಾಡಿದೆ‌.

ಕಳೆದೊಂದು ವಾರದಿಂದ ಗ್ರಾಮದಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಚಿರತೆಯನ್ನು ಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪದೇ ಪದೇ ಇಂತಥ ಘಟನೆಗಳು ನಡೆಯುತ್ತಿರುವುದರಿಂದ ಜನ ಆತಂಕಕ್ಕೊಳಗಾಗಿದ್ದು, ಚಿರತೆ ಸೆರೆ ಹಿಡಿಯುವಂತೆ ಅರಣ್ಯಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.