ETV Bharat / state

ಕೋಲಾರ ತಾಲೂಕು ಕಚೇರಿಯ ಜಮೀನು​​​ ಸರ್ವೇಯರ್​​ಗೆ ಸೋಂಕು: ರೈತರಲ್ಲಿ ಆತಂಕ

author img

By

Published : Jul 23, 2020, 6:02 PM IST

ಕೋಲಾರ ತಾಲೂಕು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸರ್ವೇಯರ್​​ನಲ್ಲಿ ಸೋಂಕು ಕಾಣಿಸಿಕೊಂಡ ಪರಿಣಾಮ ಹಲವು ಗ್ರಾಮಗಳ ರೈತರಲ್ಲಿ ಆತಂಕ ಹೆಚ್ಚಾಗಿದೆ.

kolar taluq office
ಕೋಲಾರ ತಾಲೂಕು ಕಚೇರಿ

ಕೋಲಾರ: ಜಮೀನು ಸರ್ವೇ ಮಾಡುವ ಅಧಿಕಾರಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಕಾರಣದಿಂದ ಕೋಲಾರ ತಾಲೂಕು ರೈತರಲ್ಲಿ ಆತಂಕ ಹೆಚ್ಚಾಗಿದೆ.

kolar taluq office

32 ವರ್ಷ ವಯಸ್ಸಿನ ಚಿಕ್ಕಬಳ್ಳಾಪುರದ ಚಿಂತಾಮಣಿ ಮೂಲದ ಸರ್ವೇಯರ್ ಕಳೆದ ಒಂದು ವಾರದಿಂದ ಹಲವು ರೈತರ ಜಮೀನುಗಳಿಗೆ ತೆರಳಿ ಅಲ್ಲಿ ಸರ್ವೇ ಕಾರ್ಯ, ನಕ್ಷೆ ತಯಾರಿ, ಹದ್ದುಬಸ್ತು ಮಾಡಿಕೊಟ್ಟಿದ್ದರು. ಈಗ ಅವರಲ್ಲಿ ಸೋಂಕು ದೃಢಪಟ್ಟಿದ್ದು, ಅವರು ಕೆಲಸ ಮಾಡುತ್ತಿದ್ದ ತಾಲೂಕು ಕಚೇರಿಯನ್ನು ಎರಡು ದಿನಗಳ ಕಾಲ ಸೀಲ್​​ಡೌನ್​ ಮಾಡಲಾಗಿದೆ.

ತಾಲೂಕು ಕಚೇರಿ ಸದಾ ಜನಜಂಗುಳಿಯಿಂದ ಕೂಡಿದ್ದು, ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ್ದ ವ್ಯಕ್ತಿಗಳನ್ನು ಕ್ವಾರಂಟೈನ್ ಮಾಡಲಾಗಿದೆ ಹಾಗೂ ಕಚೇರಿಯನ್ನು ಸ್ಯಾನಿಟೈಸ್ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.