ETV Bharat / state

ಮಸೀದಿಯೊಳಗೆ ನಮಾಜ್​ ಮಾಡುತ್ತಿದ್ದವರನ್ನು ವಶಕ್ಕೆ ಪಡೆದ ಲೇಡಿ ತಹಶೀಲ್ದಾರ್‌.. - ತಹಶೀಲ್ದಾರ್​ ಶೋಭಿತ

ಮಹಿಳೆಯರಿಗೆ ಮಸೀದಿಯೊಳಗೆ ನಿರ್ಬಂಧವಿದೆ. ಆದರೆ, ಕೋಲಾರ ತಹಶೀಲ್ದಾರ್​ ಮಾತ್ರ ಆ ಸಂಪ್ರದಾಯ ಮುರಿದು ದಿಟ್ಟ ಹೆಜ್ಜೆ ಇರಿಸಿದ್ದಾರೆ.

Tahasildar Shobitha
ತಹಶೀಲ್ದಾರ್​ ಶೋಭಿತ
author img

By

Published : May 1, 2020, 3:56 PM IST

Updated : May 1, 2020, 4:07 PM IST

ಕೋಲಾರ: ಲಾಕ್‌ಡೌನ್ ನಡುವೆಯೂ ಮಸೀದಿಯೊಳಗೆ ನಮಾಜ್ ಮಾಡುತ್ತಿದ್ದವರನ್ನ ಮಹಿಳಾ ತಹಶೀಲ್ದಾರ್‌ ವಶಕ್ಕೆ ಪಡೆದ ಘಟನೆ ನಡೆದಿದೆ. ಕೋಲಾರ ನಗರ ತಹಶೀಲ್ದಾರ್ ಶೋಭಿತಾ ಮಸೀದಿಯೊಳಗಿದ್ದವರ ಚಳಿ ಬಿಡಿಸಿದ್ದಾರೆ.

ಲಾಕ್‌ಡೌನ್ ಹಿನ್ನೆಲೆ ಕೋಲಾರ ಜಿಲ್ಲೆಯಾದ್ಯಂತ ದೇವಸ್ಥಾನ,ಚರ್ಚ್​, ಮಸೀದಿಗಳಿಗೆ ಜಿಲ್ಲಾಡಳಿತದ ವತಿಯಿಂದ ನಿರ್ಬಂಧವಿದೆ. ಆದರೂ ಜಿಲ್ಲಾಡಳಿತ ಕಣ್ತಪ್ಪಿಸಿ ನಿನ್ನೆ ಸಂಜೆ ಕೋಲಾರ ನಗರದ ಮುನಿಸಿಪಲ್ ಆಸ್ಪತ್ರೆಯ ಮುಂಭಾಗ ಇರುವ ಮಸೀದಿಯೊಳಗೆ ನಮಾಜ್ ಮಾಡಲಾಗುತ್ತಿತ್ತು.

ಮಸೀದಿಯೊಳಗೆ ನಮಾಜ್​ ಮಾಡುತ್ತಿದ್ದವರನ್ನು ವಶಕ್ಕೆ ಪಡೆದ ಮಹಿಳಾ ತಹಶೀಲ್ದಾರ್‌..

ಈ ಮಧ್ಯೆ ಮಸೀದಿಗೆ ದಾಳಿ ನಡೆಸಿದ ತಹಶೀಲ್ದಾರ್​ ಶೋಭಿತ ಅವರು, ನಮಾಜ್​ ಮಾಡುತ್ತಿದ್ದ ಸುಮಾರು 11 ಜನರನ್ನ ವಶಕ್ಕೆ ಪಡೆದು ಅವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಇದೀಗ ಶೋಭಿತ ಅವರು ದಾಳಿ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

Last Updated : May 1, 2020, 4:07 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.