ETV Bharat / state

ಠಾಣೆಯಲ್ಲೇ ಪೊಲೀಸರ ಕಾರು'ಬಾರು': ಎಣ್ಣೆ ಏಟಲ್ಲಿ ನೈಟ್‌ ಡ್ಯೂಟಿ!- ವಿಡಿಯೋ - ಮದ್ಯಪಾನ ಮಾಡುತ್ತಿರುವ ವಿಡಿಯೋವೊಂದು ವೈರಲ್

ಪೊಲೀಸರು ಠಾಣೆಯಲ್ಲಿ ಮದ್ಯಪಾನ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಿದೆ. ಘಟನೆಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Kolar Police drinking alcohol  Video viral of Kolar Police drinking alcohol  Police drinking alcohol in the station  ಠಾಣೆಯಲ್ಲಿ ಪೊಲೀಸರ ಮದ್ಯಪಾನ  ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ  ಪೊಲೀಸ್ ಠಾಣೆಯಲ್ಲಿಯೇ ಕುಳಿತು ಮದ್ಯಪಾನ  ಮದ್ಯಪಾನ ಮಾಡುತ್ತಿರುವ ವಿಡಿಯೋ  ಮದ್ಯಪಾನ ಮಾಡುತ್ತಿರುವ ವಿಡಿಯೋವೊಂದು ವೈರಲ್  ಗೌನಿಪಲ್ಲಿ ಪೊಲೀಸ್ ಠಾಣೆ
ಠಾಣೆಯಲ್ಲಿ ಪೊಲೀಸರ ಮದ್ಯಪಾನ ಮಾಡುತ್ತಿರುವ ವಿಡಿಯೋ ವೈರಲ್​
author img

By

Published : Sep 19, 2022, 9:08 AM IST

Updated : Sep 19, 2022, 9:22 AM IST

ಕೋಲಾರ: ರಾತ್ರಿ ಪಾಳಯದಲ್ಲಿ ಕಾರ್ಯನಿರ್ವಹಿಸುವ ಪೊಲೀಸ್ ಸಿಬ್ಬಂದಿ ಠಾಣೆಯಲ್ಲಿಯೇ ಕುಳಿತು ಮದ್ಯಪಾನ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿ ಪೊಲೀಸ್ ಠಾಣೆಯಲ್ಲಿ ಘಟನೆ ಜರುಗಿದೆ ಎನ್ನಲಾಗುತ್ತಿದೆ.

ಠಾಣೆಯಲ್ಲೇ ಪೊಲೀಸರ ಕಾರು'ಬಾರು'

ಪೊಲೀಸ್ ಪೇದೆಗಳಾದ ಚಲಪತಿ, ಆಂಜಿ ಹಾಗೂ ಮಂಜುನಾಥ್ ಮದ್ಯ ಸೇವಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಕರ್ತವ್ಯದ ಸಮಯದಲ್ಲಿ ಪೊಲೀಸ್ ಠಾಣೆಯನ್ನೇ ಬಾರ್ ರೀತಿಯಲ್ಲಿ ಪರಿವರ್ತಿಸಿರುವ ಸಿಬ್ಬಂದಿಯ ಬೇಜವಾಬ್ದಾರಿ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು ಕಠಿಣ ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ.

ಸಾರ್ವಜನಿಕರ ರಕ್ಷಣೆಗಿರುವ ಪೊಲೀಸರೇ ಈ ರೀತಿ ಕುಡಿದು ಕೆಲಸ ಮಾಡಿದರೆ ಇವರಿಂದ ರಕ್ಷಣೆ ಹೇಗೆ ಸಾಧ್ಯ? ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ಇದನ್ನೂ ಓದಿ: ಕುಡಿದು ತೂರಾಡಿದ ಬಸ್ ಡ್ರೈವರ್: ಪ್ರಯಾಣಿಕರು ಅತಂತ್ರ

Last Updated : Sep 19, 2022, 9:22 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.