ETV Bharat / state

ಕೋಲಾರ ನಗರಸಭೆ, ಅಬಕಾರಿ ಆಯುಕ್ತರ ಕಚೇರಿ, ಪೊಲೀಸ್ ಠಾಣೆ ಸೀಲ್​ಡೌನ್

author img

By

Published : Jul 28, 2020, 6:11 PM IST

ಕೋಲಾರದ ಗಲ್‌ಪೇಟೆ ಪೊಲೀಸ್​ ಕಾನ್ಸ್​ಟೇಬಲ್​ಗೆ ಕೊರೊನಾ ಸೋಂಕು ದೃಢಪಟ್ಟಿದೆ. ಪರಿಣಾಮ, ಗಲ್‌ಪೇಟೆ ಪೊಲೀಸ್ ಠಾಣೆಯನ್ನು ಮೂರು ದಿನಗಳ ಕಾಲ ಸೀಲ್‌ಡೌನ್ ಮಾಡಲಾಗಿದೆ. ಅಬಕಾರಿ ಇಲಾಖೆಯ ನಾಲ್ಕು ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಕೋಲಾರ ಅಬಕಾರಿ ಆಯುಕ್ತರ ಕಚೇರಿಯನ್ನು ಸಂಪೂರ್ಣವಾಗಿ ಸೀಲ್‌ಡೌನ್ ಮಾಡಲಾಗಿದೆ.

ಕೋಲಾರದಲ್ಲಿ ಕೊರೊನಾ ವೈರಸ್ ನ್ಯೂಸ್

ಕೋಲಾರ : ಕೊರೊನಾ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ 2 ನಗರಸಭೆ, ಅಬಕಾರಿ ಆಯುಕ್ತರ ಕಚೇರಿ ಹಾಗೂ ಪೊಲೀಸ್ ಠಾಣೆ ಸೀಲ್​ಡೌನ್ ಮಾಡಲಾಗಿದೆ.

ನಗರಸಭೆಯ 55 ವರ್ಷದ ಪೌರಾಯುಕ್ತರಿಗೆ ಸೋಂಕು ದೃಢಪಟ್ಟಿದ್ದು, ಅವರ ಪತ್ನಿಯ ಕೋವಿಡ್​ ವರದಿಯೂ ಸಹ ಪಾಸಿಟಿವ್ ಬಂದಿದೆ.

ಇದರಿಂದಾಗಿ ಕೋಲಾರ ನಗರಸಭೆ ಹಾಗೂ ಪೌರಾಯುಕ್ತರ ಮನೆ ಸೀಲ್​ಡೌನ್ ಮಾಡಲಾಗಿದೆ. ಜೊತೆಗೆ ನಗರಸಭೆ ಸದಸ್ಯರು, ಪೌರ ಕಾರ್ಮಿಕರು ಹಾಗೂ ಅಧಿಕಾರಿಗಳಲ್ಲಿ ಆತಂಕ ಹೆಚ್ಚಾಗಿದೆ. ಕೆಜಿಎಫ್ ನಗರಸಭೆಯ 50 ವರ್ಷದ ಪೌರ ಕಾರ್ಮಿಕನಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಪೌರ ಕಾರ್ಮಿಕ ವಾಸವಿದ್ದ ಮನೆ ಹಾಗೂ ನಗರಸಭೆ ಸೀಲ್​ಡೌನ್ ಮಾಡಲಾಗಿದೆ.

ಕೋಲಾರದ ಗಲ್‌ಪೇಟೆ ಪೊಲೀಸ್​ ಕಾನ್ಸ್​ಟೇಬಲ್​ಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಗಲ್‌ಪೇಟೆ ಪೊಲೀಸ್ ಠಾಣೆಯನ್ನು ಮೂರು ದಿನಗಳ ಕಾಲ ಸೀಲ್‌ಡೌನ್ ಮಾಡಲಾಗಿದೆ. ಅಬಕಾರಿ ಇಲಾಖೆಯ ನಾಲ್ಕು ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಕೋಲಾರ ಅಬಕಾರಿ ಆಯುಕ್ತರ ಕಚೇರಿಯನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.