ETV Bharat / state

ಕೋಲಾರ ಲಾಕಪ್‌ ಡೆತ್ ಪ್ರಕರಣ: ಪಿಎಸ್​ಐ ಸೇರಿ ಇಬ್ಬರು ಕಾನ್ಸ್​ಟೇಬಲ್​ಗಳ ಅಮಾನತು - Kolar SP Narayana

ಕೋಲಾರದಲ್ಲಿ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್​ಐ ಸೇರಿ ಇಬ್ಬರು ಕಾನ್ಸ್​ಟೇಬಲ್​ಗಳನ್ನು ಅಮಾನತು ಮಾಡಲಾಗಿದೆ.

ಕೋಲಾರ
ಕೋಲಾರ
author img

By ETV Bharat Karnataka Team

Published : Nov 28, 2023, 9:15 PM IST

Updated : Nov 29, 2023, 9:42 AM IST

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಭಾಸ್ಕರ್

ಕೋಲಾರ : ಲಾಕಪ್‌ ಡೆತ್ ಪ್ರಕರಣವೊಂದರಲ್ಲಿ ಪಿಎಸ್​ಐ ಸೇರಿ ಇಬ್ಬರು ಪೊಲೀಸ್ ಕಾನ್ಸ್​ಟೇಬಲ್​ಗಳನ್ನು ಅಮಾನತು ಮಾಡಲಾಗಿದ್ದು, ಮೂವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಪೊಲೀಸ್‌ ಠಾಣೆಯಲ್ಲಿ ವಿಚಾರಣೆಗೆಂದು ಕರೆತಂದಿದ್ದ ಆರೋಪಿಯೊಬ್ಬರು ಅಕ್ಟೋಬರ್ 1ರಂದು ಸಾವನ್ನಪ್ಪಿದ್ದರು. ಪ್ರಕರಣದಲ್ಲಿ ಠಾಣೆಯ ಪಿಎಸ್‌ಐ ಪ್ರದೀಪ್ ಸಿಂಗ್ ಹಾಗೂ ಪೊಲೀಸ್ ಕಾನ್ಸ್​ಟೇಬಲ್​​ ​ ಮಂಜುನಾಥ್, ಮಹಾಂತೇಶ್ ಪೂಜಾರಿ ಎಂಬವರನ್ನು ಅಮಾನತು ಮಾಡಲಾಗಿದೆ.

ಕಳ್ಳತನ ಪ್ರಕರಣದಲ್ಲಿ ಆಂಧ್ರಪ್ರದೇಶದ ಮದನಪಲ್ಲಿ ಮೂಲದ ಮುನಿರಾಜು ಮತ್ತು ಬಾಲಾಜಿ ಎಂಬ ಯುವಕರನ್ನು ವಿಚಾರಣೆಗೆಂದು ಸೆಪ್ಟೆಂಬರ್ 17ರಂದು ಠಾಣೆಗೆ ಕರೆತಂದಿದ್ದರು. ಅವರನ್ನು ಹಿರಿಯ ಅಧಿಕಾರಿಗಳ ಗಮನಕ್ಕೂ ತರದೇ, ಬೇರೆ ಬೇರೆ ಸ್ಥಳಗಳಲ್ಲಿ ಇರಿಸಿ, 15 ದಿನಗಳ ಕಾಲ ವಿಚಾರಣೆಗೆ ಒಳಪಡಿಸಿದ್ದರು.

ಆದರೆ, ಅಕ್ಟೋಬರ್ 1ರಂದು ಪೊಲೀಸ್‌ ಸುಪರ್ದಿಯಲ್ಲೇ ಮುನಿರಾಜು ಎಂಬವರು ಸಾವನ್ನಪ್ಪಿದ್ದರು. ಇದಾದ ನಂತರ ಪ್ರಕರಣವನ್ನು ತನಿಖೆಗೆ ಆದೇಶಿಸಲಾಗಿತ್ತು. ಇಲಾಖೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಾರದೇ ಆರೋಪಿಗಳನ್ನ ವಿಚಾರಣೆ ಮಾಡಿ, ಕರ್ತವ್ಯ ಲೋಪ ಎಸಗಿದ್ದಾರೆ ಎಂಬ ಆರೋಪದ ಮೇಲೆ ಮೂವರನ್ನು ಅಮಾನತು ಮಾಡಿ ಕೋಲಾರ ಎಸ್​ಪಿ ನಾರಾಯಣ ಅವರು ಅಮಾನತು ಮಾಡಿದ್ದಾರೆ. ಅಲ್ಲದೇ ಮೂವರ ವಿರುದ್ಧವೂ ಎಫ್‌ಐಆರ್‌ ದಾಖಲಾಗಿದೆ.

ಇದನ್ನೂ ಓದಿ: ಹೊಸರಿತ್ತಿ ಲಾಕಪ್​ಡೆತ್​ ಪ್ರಕರಣ: ನ್ಯಾಯಕ್ಕಾಗಿ ಕುಟುಂಬಸ್ಥರ ಆಗ್ರಹ

ಹೊಸರಿತ್ತಿ ಲಾಕಪ್​ಡೆತ್​ ಪ್ರಕರಣ (ಪ್ರತ್ಯೇಕ ಪ್ರಕರಣ) : ಹಾವೇರಿಯ ಹೊಸರಿತ್ತಿ ಪೊಲೀಸ್​ ಠಾಣೆಯಲ್ಲಿ ನಡೆದ ಲಾಕಪ್‌ಡೆತ್ ಆರೋಪ ಪ್ರಕರಣದಲ್ಲಿ ‌ನ್ಯಾಯ ಬೇಕು ಎಂದು ಮೃತನ ಸಹೋದರಿ ಐಜಿಯವರಿಗೆ ದೂರು ನೀಡಲು (ಸೆಪ್ಟೆಂಬರ್ 14-2023) ಮುಂದಾಗಿದ್ದರು. ಮೃತ ಗೋವಿಂದ ಪೂಜಾರ ಎಂಬುದು ತಿಳಿದು ಬಂದಿತ್ತು. ಹುಬ್ಬಳ್ಳಿಯಲ್ಲಿ ಅಂದು ಈ ಬಗ್ಗೆ ಮೃತ ಗೋವಿಂದ ಪೂಜಾರ ಸಹೋದರಿ ಗೀತಾ ಪೂಜಾರಿ ಮಾತನಾಡಿ, ''ನಮ್ಮ‌ ಸಹೋದರನನ್ನು ಪೊಲೀಸರು ಕಳ್ಳತನ ಪ್ರಕರಣದಲ್ಲಿ‌ ಕರೆದುಕೊಂಡು ಹೋಗಿ ವಿಚಾರಣೆ ‌ನೆಪದಲ್ಲಿ‌ ಮನಬಂದಂತೆ ಥಳಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿಯೇ ಆತ ಮೃತಪಟ್ಟಿದ್ದು, ಪಿಡ್ಸ್ ಬಂದು ಸಾವನ್ನಪ್ಪಿದ್ದಾನೆ ಎಂದು ಹೊಸರತ್ತಿ‌ ಪೊಲೀಸರು ಕಥೆ ಕಟ್ಟಿದ್ದಾರೆ‌. ನನ್ನ ಸಹೋದರನ‌ ಸಾವಿಗೆ ಪೊಲೀಸರೇ ಕಾರಣ'' ಎಂದು ಆರೋಪಿಸಿದ್ದರು.

ಇದೇ ವೇಳೆ ಮಾತನಾಡಿದ ಮೃತನ‌ ಮಾವ ಶರಣಪ್ಪ‌ ಕೂಡ ಪೊಲೀಸ್ ಹಲ್ಲೆಯಿಂದ ನಮ್ಮ ಅಳಿಯ ಸಾವನ್ನಪ್ಪಿದ್ದಾನೆ.‌ ಕಳ್ಳತನ‌ ಪ್ರಕರಣ ಅಂತ ಕರೆದುಕೊಂಡು ಹೋಗಿ ಹಲ್ಲೆ ಮಾಡಿದ್ದಾರೆ. ಬಳಿಕ ಹಾವೇರಿ, ಗುತ್ತಲ ಆಸ್ಪತ್ರೆಯಲ್ಲಿ ತಮಗೆ ಹೇಗೆಬೇಕೋ ಹಾಗೇ ದಾಖಲೆ ಸೃಷ್ಟಿಸಿ ಪ್ರಕರಣ ತಿರುಚುವ ಕೆಲಸವನ್ನು ‌ಪೊಲೀಸರು ಮಾಡುತ್ತಿದ್ದು, ನ್ಯಾಯಕ್ಕಾಗಿ ಐಜಿ ಅವರಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದರು.

Last Updated : Nov 29, 2023, 9:42 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.