ಕೋಲಾರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಸಲುವಾಗಿ, ಎರಡು ಖಾಸಗಿ ಏಜೆನ್ಸಿಗಳಿಂದ ಸರ್ವೆ ಮಾಡಿಸಿರುವುದಾಗಿ ಎಂ.ಎಲ್.ಸಿ ಅನಿಲ್ ಕುಮಾರ್ ತಿಳಿಸಿದ್ದಾರೆ.
ಇಂದು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ, ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಮಾಡಿಸಿರುವಂತಹ ಎರಡು ಸರ್ವೆಯಲ್ಲಿ ಒಂದು ಶೇ 57ರಷ್ಟು ಫಲಿತಾಂಶ ಕೊಟ್ಟಿದೆ, ಇನ್ನೊಂದು ಶೇ 60ರಷ್ಟು ನೀಡಿದ್ದು, ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ತುಂಬಾ ಸೇಫ್ ಎಂದು ವರದಿ ಬಂದಿದೆ ಎಂದರು.
ಅಲ್ಲದೇ, ಅ.2 ರಿಂದ 12 ನೇ ತಾರೀಖಿನವರೆಗೆ, ಸುಮಾರು 40 ಜನರನ್ನೊಳಗೊಂಡ ತಂಡ ಕ್ಷೇತ್ರಕ್ಕೆ ಬಂದು ಒಬ್ಬರು ಒಂದು ದಿನಕ್ಕೆ 125 ಜನರಂತೆ ಸರ್ವೆ ನಡೆಸಿ, ಸುಮಾರು 50 ಸಾವಿರ ಸ್ಯಾಂಪಲ್ಸ್ ಶೇಖರಣೆ ಮಾಡಿದ್ದು, ಸಿದ್ದರಾಮಯ್ಯ ಅವರು ಸ್ಪರ್ಧೆ ಮಾಡಲು ಪೂರಕವಾಗಿದೆ ಎಂದು ಹೇಳಲಾಗಿದೆ ಎಂದರು.
ಇನ್ನು ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವಂತೆ ಮನವಿ ಮಾಡಿದ್ದರೂ ಅವರು ಅವರದ್ದೇ ತಯಾರಿಯನ್ನ ಮಾಡಿಕೊಂಡಿದ್ದು ಅಂತಿಮವಾಗಿ ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ದರಾಗಿರುತ್ತಾರೆ ಎಂದರು.
ಇದನ್ನೂ ಓದಿ: ಬಾದಾಮಿ ವಿಧಾನಸಭಾ ಕ್ಷೇತ್ರದಲ್ಲೇ ಸ್ಪರ್ಧೆ ಮಾಡುವಂತೆ ಸಿದ್ದರಾಮಯ್ಯಗೆ ಒತ್ತಾಯ