ETV Bharat / state

ರಸ್ತೆಯಲ್ಲಿ ಕುಸಿದು ಬಿದ್ದ ಮಹಿಳೆ, ನೋಡುತ್ತಾ ನಿಂತ ಜನ... ಸತ್ತೇ ಹೋಯಿತು ಮಾನವೀಯತೆ! - ಕೋಲಾರ ಮಹಿಳೆ ಸಾವು

ರಸ್ತೆಯಲ್ಲಿ ಕುಸಿದು ಬಿದ್ದ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಬೇಕಿದ್ದ ಜನರು ಕೊರೊನಾ ಭಯದಿಂದಾಗಿ ಸುಮಾರು ಮೂರ್ನಾಲ್ಕು ಗಂಟೆಗಳ‌ ಕಾಲ ನೋಡುತ್ತಾ ನಿಂತಿದ್ದರು.

Kolar district women dead in road
Kolar district women dead in road
author img

By

Published : Apr 29, 2021, 4:48 PM IST

ಕೋಲಾರ: ಮಹಿಳೆಯೋರ್ವಳು ದಾರಿಯಲ್ಲಿ ಕುಸಿದು ಬಿದ್ದಿದ್ದರೂ ಕೊರೊನಾ ಭಯದಲ್ಲಿ ಆಕೆಯ ಬಳಿ ಯಾರೂ ಸಹ ಸುಳಿಯದೆ ಮಾನವೀಯತೆ ಮರೆತ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಮುಳಬಾಗಿಲು ತಾಲೂಕಿನ ಸಂಗೊಂಡಹಳ್ಳಿ ಗ್ರಾಮದ ಲೀಲಾವತಿ (48) ಎಂಬ ಮಹಿಳೆ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ.

ಕುಸಿದು ಬಿದ್ದಾಗ ಆಕೆಯನ್ನು ಉಪಚರಿಸಿ ಆಸ್ಪತ್ರೆಗೆ ಸಾಗಿಸಬೇಕಿದ್ದ ಜನರು ಕೊರೊನಾ ಭಯದಿಂದಾಗಿ ಸುಮಾರು ಮೂರ್ನಾಲ್ಕು ಗಂಟೆಗಳ‌ ಕಾಲ ನೋಡುತ್ತಾ ನಿಂತಿದ್ದರು. ಇದರಿಂದ ಆಕೆ ಕುಸಿದ ಸ್ಥಳದಲ್ಲೇ ಅಸುನೀಗಿದ್ದಾಳೆ.

ನಂತರ ಸ್ಥಳಕ್ಕೆ ತಾಯಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಆಗಮಿಸಿ ಕೊರೊನಾ ಪರೀಕ್ಷೆ ನಡೆಸಿದ್ರು. ಈ ವೇಳೆ ಕೊರೊನಾ ಇಲ್ಲವೆಂದು ತಿಳಿದ ನಂತರ ಶವವನ್ನು ಸ್ಥಳಾಂತರಿಸಲಾಯಿತು. ಇನ್ನು ತಹಶೀಲ್ದಾರ ರಾಜಶೇಖರ್ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ, ಶವ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.