ETV Bharat / state

ಪ್ರತಿನಿತ್ಯ ಟೀ - ಕಾಫಿ, ತಿಂಡಿ ಸೇವೆ: ಅಡುಗೆ ಭಟ್ಟರ ಸೇವೆಗೆ ಫಿದಾ ಆದ ಕೋಲಾರ ಪೊಲೀಸರು - ಮೂವರು ಅಡುಗೆ ಭಟ್ಟರು

ಹೆಸರಾಂತ ಅಡುಗೆ ಭಟ್ಟರಾದ ಕೋಲಾರದ ಮಂಜುನಾಥ್, ಬದ್ರಿ ನಾರಾಯಣ್ ಹಾಗೂ ರಮಾನಂದಂ ಎಂಬುವರು ಕರ್ತವ್ಯ ನಿರತ ಪೊಲೀಸರಿಗೆ ನಿತ್ಯ ವಿವಿಧ ಬಗೆ ಅಡುಗೆಗಳನ್ನ ಮಾಡುವ ಮೂಲಕ ತಮ್ಮ ಕೈಲಾದ ಸೇವೆ ಮಾಡುತ್ತಿದ್ದಾರೆ.

Kolar cooking service for the police lockdown time
ಅಡುಗೆ ಭಟ್ಟರ ಸೇವೆಗೆ ಫಿದಾ ಆದ ಕೋಲಾರ ಪೊಲೀಸರು
author img

By

Published : May 20, 2021, 10:07 PM IST

ಕೋಲಾರ: ಕೊರೊನಾ ಲಾಕ್​​ಡೌನ್ ಆಗಿದ್ದು, ಕೊರೊನಾ ವಾರಿಯರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಮೂವರು ಅಡುಗೆ ಭಟ್ಟರು ನಿತ್ಯ ಟೀ-ಕಾಫಿ, ತಿಂಡಿ ಸೇವೆ ಹಾಗೂ ವಿವಿಧ ರೀತಿಯ ಪಾಯಸವನ್ನ ಮಾಡಿಕೊಡುವ ಮೂಲಕ ಹೆಸರಾಗಿದ್ದಾರೆ.

ಅಡುಗೆ ಭಟ್ಟರ ಸೇವೆಗೆ ಫಿದಾ ಆದ ಕೋಲಾರ ಪೊಲೀಸರು

ಓದಿ: 'ನನ್ನನ್ನು ಬದುಕಿಸಿ'.. ಶಾಸಕರ ಮುಂದೆ ಕೊರೊನಾ ಸೋಂಕಿತನ ಗೋಳಾಟ..!

ಹೆಸರಾಂತ ಅಡುಗೆ ಭಟ್ಟರಾದ ಕೋಲಾರದ ಮಂಜುನಾಥ್, ಬದ್ರಿ ನಾರಾಯಣ್ ಹಾಗೂ ರಮಾನಂದಂ ಎಂಬುವರು ಕರ್ತವ್ಯ ನಿರತ ಪೊಲೀಸರಿಗೆ ನಿತ್ಯ ವಿವಿಧ ಬಗೆ ಅಡುಗೆಗಳನ್ನ ಮಾಡುವ ಮೂಲಕ ತಮ್ಮ ಕೈಲಾದ ಸೇವೆ ಮಾಡುತ್ತಿದ್ದಾರೆ.

ಪ್ರತಿ ನಿತ್ಯ ಬಗೆಬಗೆಯ ಪಾಯಸ ಮಾಡುವುದರೊಂದಿಗೆ, ಕೊರೊನಾ ಸಂದರ್ಭದಲ್ಲಿ ಕಷಾಯ ಮಾಡಿ ಪೊಲೀಸರಿಗೆ ನೀಡುತ್ತಿದ್ದು, ಇವರ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ನೀರಿನ ಬಾಟಲ್, ಬಿಸ್ಕೆಟ್, ಬಾಳೆಹಣ್ಣು ಹಾಗೂ ಚಾಕೋಲೇಟ್ ಗಳನ್ನ ನೀಡುತ್ತಿದ್ದು, ಪೊಲೀಸ್ ಇಲಾಖೆ ಇವರಿಗೆ ಧನ್ಯವಾದಗಳನ್ನ ಅರ್ಪಿಸಿದ್ದಾರೆ.

ಕೊರೊನಾ ಮಧ್ಯೆ ಭಯದ ಹಂಗು ಮರೆತು, ತಮ್ಮ‌ ಕುಟುಂಬವನ್ನ ದೂರ ಮಾಡಿಕೊಂಡು ಸಾರ್ವಜನಿಕರ ಹಿತ ಬಯಸುವಂತಹ ಪೊಲೀಸರಿಗೆ, ನಾವು ನಿತ್ಯ ಮನೆಯಿಂದಲೇ ಅಡುಗೆ ಮಾಡಿಕೊಡುತ್ತಿರುವುದು ತೃಪ್ತಿದಾಯಕವಾಗಿದೆ ಎಂದು ಅಡುಗೆ ಭಟ್ಟರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.