ETV Bharat / state

ಕೊರೊನಾ ಆತಂಕ: ಕೋಲಾರ ಜಿಲ್ಲೆಯಲ್ಲಿ ಗಡಿ ಬಂದ್​​​ - ಕೊರೊನಾ ಪ್ರಮಾಣ ಹೆಚ್ಚಳ

ಕೊರೊನಾ ಆತಂಕ ಹೆಚ್ಚಾಗಿರುವ ಹಿನ್ನೆಲೆ ಕೋಲಾರ ಜಿಲ್ಲೆಯಾದ್ಯಂತ ಗಡಿಗಳನ್ನು ಬಂದ್ ಮಾಡಲಾಗಿದೆ.

kolar border bandh due to corona virus
ಕೊರೊನಾ ಆತಂಕ
author img

By

Published : Mar 23, 2020, 11:58 AM IST

ಕೋಲಾರ: ಕೊರೊನಾ ಹರಡುವಿಕೆ ಪ್ರಮಾಣ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣ ಈ ಮಹಾಮಾರಿಯನ್ನು ನಿಯಂತ್ರಿಸಲು ಜಿಲ್ಲೆಯ ಗಡಿಗಳನ್ನ ಬಂದ್ ಮಾಡಲಾಗಿದೆ.

ಕೊರೊನಾ ಆತಂಕ, ಜಿಲ್ಲೆಯ ಗಡಿಗಳು ಬಂದ್​

ಗಡಿಗಳು ಬಂದ್​​ ಆಗಿರುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಗಡಿಭಾಗಗಳಾದ ಕೋಲಾರದಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಮಸಂದ್ರ, ಮುಳಬಾಗಿಲಿನಿಂದ ಆಂಧ್ರ ಹಾಗೂ ಚೆನ್ನೈಗೆ ಸಂಪರ್ಕ ಕಲ್ಪಿಸುವ ನಂಗಲಿ, ಶ್ರೀನಿವಾಸಪುರದಿಂದ ಮದನಪಲ್ಲಿಗೆ ಸಂಪರ್ಕ ಕಲ್ಪಿಸುವ ರಾಯಲ್ಪಾಡು, ಮಾಲೂರಿನಿಂದ ಹೊಸೂರಿಗೆ ಸಂಪರ್ಕ ಕಲ್ಪಿಸುವ ಸಂಪಂಗೆರೆ, ಕೆಜಿಎಫ್ ನಿಂದ ರಾಜ್ ಪೇಟೆ ರಸ್ತೆ, ಕಾಮಸಮುದ್ರಂದಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವಂತಹ ಗಡಿಗಳನ್ನ ಬಂದ್ ಮಾಡಲಾಗಿದೆ.

ಸರ್ಕಾರದ ಆದೇಶದಂತೆ ಇಂದಿನಿಂದ ಆಂಧ್ರ ಮತ್ತು ತಮಿಳುನಾಡಿನ ಗಡಿ ಬಂದ್ ಆಗಿದೆ. ಇನ್ನು ಹೊರ ರಾಜ್ಯಗಳಿಂದ ಯಾವುದೇ ವಾಹನಗಳು ಜಿಲ್ಲೆಗೆ ಪ್ರವೇಶಿಸದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದ್ದು, ಅದರಂತೆ ಗಡಿಭಾಗಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಕೋಲಾರ ಜಿಲ್ಲೆಯ ಆರು ಕಡೆ ಚೆಕ್​​ಪೋಸ್ಟ್​ಗಳನ್ನು ತೆಗೆದು ಗಡಿ ಬಂದ್​ ಮಾಡಿರುವ ಹಿನ್ನೆಲೆ ಕಿಲೋಮೀಟರ್​ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿವೆ. ಬಂದಂತಹ ವಾಹನಗಳನ್ನ ಪೊಲೀಸರು ವಾಪಸ್ ಕಳುಹಿಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.