ETV Bharat / state

ಸೆಸ್ ಶುಲ್ಕ ಹೆಚ್ಚಳ ವಾಪಸ್​ ಪಡೆಯುವಂತೆ ಆಗ್ರಹ: ಕೋಲಾರ ಎಪಿಎಂಸಿ ಬಂದ್​​​ - ಕೋಲಾರ ಎಪಿಎಂಸಿ ಬಂದ್​​​

ಕೋಲಾರ ಜಿಲ್ಲೆಯಾದ್ಯಂತ ಎಪಿಎಂಸಿ ಮಾರುಕಟ್ಟೆಗಳಲ್ಲಿ ಇಂದು ವ್ಯಾಪಾರ ವಹಿವಾಟು ಸ್ಥಗಿತಗೊಳಿಸಲಾಗಿದೆ. 0.30 ಪೈಸೆ ಇದ್ದ ಸೆಸ್ ಶುಲ್ಕವನ್ನು 1 ರೂ.ಗೆ ಹೆಚ್ಚಿಲಾಗಿತ್ತು. ಈ ಹಿನ್ನೆಲೆ ಜಿಲ್ಲೆಯಲ್ಲಿ ಮಾರುಕಟ್ಟೆಗಳ ಬಂದ್​ಗೆ ಕರೆ ನೀಡಿದ್ದಾರೆ‌.

kolar apmc closed and Request to withdraw cess fee increase
ಕೋಲಾರ ಎಪಿಎಂಸಿ
author img

By

Published : Dec 21, 2020, 7:11 PM IST

ಕೋಲಾರ: ಎಪಿಎಂಸಿ ಸೆಸ್ ಶುಲ್ಕ ಹೆಚ್ಚಳ ವಾಪಸ್​ ಪಡೆಯುವಂತೆ ಆಗ್ರಹಿಸಿ ಕೋಲಾರ ಜಿಲ್ಲೆಯಾದ್ಯಂತ ಎಪಿಎಂಸಿ ಮಾರುಕಟ್ಟೆ ಬಂದ್​​ಗೆ ಕರೆ ನೀಡಿದ್ದಾರೆ.

ಅದರಂತೆ ಕೋಲಾರದಲ್ಲಿ ಏಷ್ಯಾದ ಎರಡನೇ ದೊಡ್ಡ ಎಪಿಎಂಸಿ ಮಾರುಕಟ್ಟೆ ಇಂದು ಬಂದ್ ಆಗಿದೆ. ಕೋಲಾರ ಜಿಲ್ಲೆಯಾದ್ಯಂತ ಎಪಿಎಂಸಿ ಮಾರುಕಟ್ಟೆಗಳಲ್ಲಿ ಇಂದು ವ್ಯಾಪಾರ ವಹಿವಾಟು ಸ್ಥಗಿತಗೊಳಿಸಲಾಗಿದೆ. 0.30 ಪೈಸೆ ಇದ್ದ ಸೆಸ್ ಶುಲ್ಕವನ್ನು 1 ರೂ.ಗೆ ಹೆಚ್ಚಿಲಾಗಿತ್ತು. ಈ ಹಿನ್ನೆಲೆ ಜಿಲ್ಲೆಯಲ್ಲಿ ಮಾರುಕಟ್ಟೆಗಳ ಬಂದ್​ಗೆ ಕರೆ ನೀಡಿದ್ದಾರೆ‌.

ಈ ಹಿನ್ನೆಲೆ ಕೋಟ್ಯಂತರ ರೂ. ವಹಿವಾಟು ನಡೆಯುತ್ತಿದ್ದ ಮಾರುಕಟ್ಟೆ ಇಂದು ಖಾಲಿ ಖಾಲಿಯಾಗಿದೆ. ಇನ್ನು ಕೋಲಾರ ಎಪಿಎಂಸಿ ಪ್ರಾಂಗಣದ ಒಳಗೆ ಅಥವಾ ಹೊರಗೆ ವ್ಯವಹಾರ ಮಾಡುವಂತವರಿಗೆ ಒಂದೇ ತೆರಿಗೆ ಜಾರಿಯಾಗಬೇಕು. ಜೊತೆಗೆ ಈ ಹಿಂದೆ 0.30 ಪೈಸೆ ಇದ್ದ ಸೆಸ್​ ಏಕಾಏಕಿ ಶೇ. 1 ರೂ.ಗೆ ಹೆಚ್ಚಳ ಮಾಡಿದ್ದು, ಹೆಚ್ಚಳ ಮಾಡಿರುವ ಎಪಿಎಂಸಿ ಸೆಸ್ ರದ್ದುಪಡಿಸಬೇಕೆಂದು ಒತ್ತಾಯಿಸಿದ್ದಾರೆ.

ಕೋಲಾರ ಜೈ ಕರ್ನಾಟಕ ದಲ್ಲಾಳರ ಸಂಘ, ಜೈ ಭಾರತ್ ವರ್ತಕರ ಸಂಘ, ಜೆ.ಎನ್.ಜೆ ತರಕಾರಿ ಮಂಡಿ ಮಾಲೀಕರ ಸಂಘ, ಹಮಾಲರ ಸಂಘ ಸೇರಿದಂತೆ ಹಲವು ಸಂಘಟನೆಗಳು ಬಂದ್‍ಗೆ ಬೆಂಬಲ ವ್ಯಕ್ತಪಡಿಸಿವೆ. ಇನ್ನು ಈಗಾಗಲೇ ರೈತ ಬಾಂಧವರು ಹಣ್ಣು ಮತ್ತು ತರಕಾರಿಗಳನ್ನು ವಹಿವಾಟಿಗೆ ತರಬಾರದೆಂದು ಮನವಿ ಮಾಡಲಾಗಿತ್ತು. ಅದರಂತೆ ಇಂದು ಎಂಪಿಎಂಸಿ ಮಾರುಕಟ್ಟೆಗಳು ಜಿಲ್ಲೆಯಾದ್ಯಂತ ಖಾಲಿ ಖಾಲಿಯಾಗಿದ್ದವು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.