ETV Bharat / state

ವರ್ತೂರ್ ಪ್ರಕಾಶ್‌ಗೂ ಕಾಂಗ್ರೆಸ್​​ಗೂ ಯಾವುದೇ ಸಂಬಂಧವಿಲ್ಲ: ಮುನಿಯಪ್ಪ - ಮುನಿಯಪ್ಪ, ವರ್ತೂರ್ ಪ್ರಕಾಶ್

ಕಾಂಗ್ರೆಸ್ ಕಮಿಟಿ ಅವರನ್ನ ಪಕ್ಷಕ್ಕೆ ಸೇರಿಸುವುದಿಲ್ಲ ಎಂದು ಖಡಕ್ ಆಗಿ ಹೇಳಿದೆ. ಮಾಜಿ ಸಚಿವ ವರ್ತೂರ್ ಪ್ರಕಾಶ್ ಕಾಂಗ್ರೆಸ್​​ನಲ್ಲಿ ಮಧ್ಯಪ್ರವೇಶಿಸುವುದು ಸೂಕ್ತವಲ್ಲ..

Muniyappa, varthur prakash
ಮುನಿಯಪ್ಪ, ವರ್ತೂರ್ ಪ್ರಕಾಶ್
author img

By

Published : Feb 16, 2021, 3:49 PM IST

Updated : Feb 16, 2021, 6:07 PM IST

ಕೋಲಾರ : ಮಾಜಿ ಸಚಿವ ವರ್ತೂರ್ ಪ್ರಕಾಶ್​​​ ಹಾಗೂ ಕಾಂಗ್ರೆಸ್​​​​ಗೆ ಯಾವುದೇ ಸಂಬಂಧವಿಲ್ಲ ಎಂದು ಮಾಜಿ ಸಂಸದ ಕೆ ಹೆಚ್ ಮುನಿಯಪ್ಪ ಸ್ಪಷ್ಟನೆ ನೀಡಿದ್ದಾರೆ.

ಇಂದು ಕೋಲಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಶಾಸಕ ವರ್ತೂರ್ ಪ್ರಕಾಶ್, ಕಾಂಗ್ರೆಸ್​​​​ನಲ್ಲಿ ಗೊಂದಲದ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ಕಾಂಗ್ರೆಸ್​​​ ಹಾಗೂ ವರ್ತೂರ್ ಪ್ರಕಾಶ್ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದರು.

ವರ್ತೂರ್ ಪ್ರಕಾಶ್​​ ಹಾಗೂ ಕಾಂಗ್ರೆಸ್​​ಗೆ ಯಾವುದೇ ಸಂಬಂಧವಿಲ್ಲ: ಮುನಿಯಪ್ಪ

ಅಲ್ಲದೆ ಗ್ರಾಮ ಪಂಚಾಯತ್‌ ಚುನಾವಣೆಗಳು ನಡೆಯುವ ಮೊದಲೇ, ನಾಯಕರುಗಳಾದ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಅವರು ವರ್ತೂರ್ ಪ್ರಕಾಶ್​ಗೊ ಕಾಂಗ್ರೆಸ್​ ಅಭ್ಯರ್ಥಿಗಳಿಗೂ ಸಂಬಂಧವಿಲ್ಲ ಎಂದು ಹೇಳಿದ್ದರು.

ವರ್ತೂರ್ ಪ್ರಕಾಶ್ ಜವಾಬ್ದಾರಿಯಿಂದ ನಡೆದುಕೊಳ್ಳಬೇಕೆಂದು ಸೂಚಿಸಿದರು. ಅಲ್ಲದೆ ವಿನಾಕಾರಣ ಬೇರೆ ಬೇರೆ ಹೆಸರುಗಳನ್ನ ತೆಗೆಯುವ ಮೂಲಕ ಕಾಂಗ್ರೆಸ್ ನಾಯಕರ ತೇಜೋವಧೆ ಮಾಡುವುದು ಸರಿಯಲ್ಲ ಎಂದರು.

ಇನ್ನು, ಕಾಂಗ್ರೆಸ್ ಕಮಿಟಿ ಅವರನ್ನ ಪಕ್ಷಕ್ಕೆ ಸೇರಿಸುವುದಿಲ್ಲ ಎಂದು ಖಡಕ್ ಆಗಿ ಹೇಳಿದೆ. ಮಾಜಿ ಸಚಿವ ವರ್ತೂರ್ ಪ್ರಕಾಶ್ ಕಾಂಗ್ರೆಸ್​​ನಲ್ಲಿ ಮಧ್ಯಪ್ರವೇಶಿಸುವುದು ಸೂಕ್ತವಲ್ಲ.

ಜೊತೆಗೆ ಕಾರ್ಯಕರ್ತರನ್ನ ದಾರಿ ತಪ್ಪಿಸುವುದು ಸರಿಯಲ್ಲ ಎಂದರು. ಒಂದು ತಿಂಗಳಲ್ಲಿ ಡಿಕೆಶಿ ಹಾಗೂ ಸಿದ್ದರಾಮಯ್ಯ ಅವರನ್ನು ಕೋಲಾರಕ್ಕೆ ಕರೆಸಿ ಸಭೆ ನಡೆಸಲಾಗುವುದು ಎಂದರು.

ಇದನ್ನೂ ಓದಿ: ಶಾಸಕ ಶ್ರೀನಿವಾಸಗೌಡರಿಗೆ ಮಾಜಿ ಶಾಸಕ ವರ್ತೂರು ಪ್ರಕಾಶ್‌ರಿಂದ ಸವಾಲ್​!

Last Updated : Feb 16, 2021, 6:07 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.