ಕೋಲಾರ: ಸಂಯುಕ್ತ ಜನತಾದಳ ಪಕ್ಷ ಹಾಗೂ ಜನತಾ ಪರಿವಾರದ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ಕಲ್ಯಾಣ ಪಾದಯಾತ್ರೆಗೆ ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಪಟೇಲ್ ಚಾಲನೆ ನೀಡಿದರು. ಗಾಂಧಿವನದಲ್ಲಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಕೋಲಾರದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಕೈಗೊಂಡರು.
ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಔದ್ಯೋಗಿಕವಾಗಿ, ಕೈಗಾರಿಕಾ ರಂಗ ಸೇರಿದಂತೆ ರೈತರ ಹಿತದೃಷ್ಟಿ ಕಾಪಾಡುವಲ್ಲಿ ರಾಜ್ಯ ಹಿಂದುಳಿದಿದೆ. ಈ ಹಿನ್ನೆಲೆಯಲ್ಲಿ, ಸಮಗ್ರ ಕರ್ನಾಟಕ ಅಭಿವೃದ್ಧಿ ದೃ಼ಷ್ಟಿಯಿಂದ ಕರ್ನಾಟಕ ಕಲ್ಯಾಣ ಪಾದಯಾತ್ರೆಯನ್ನ ಹಮ್ಮಿಕೊಳ್ಳಲಾಗಿದೆ ಎಂದರು.
ಕೋಲಾರದಿಂದ ಪಾದಯಾತ್ರೆ ಆರಂಭಗೊಂಡು ಬೆಂಗಳೂರಿನ ಮೌರ್ಯ ಸರ್ಕಲ್ನಲ್ಲಿರುವ ಮಹಾತ್ಮಾ ಗಾಂಧಿ ಪ್ರತಿಮೆ ಮುಂದೆ ಮುಕ್ತಾಯವಾಗಲಿದೆ. ರಾಜ್ಯದ ಜನತೆ ಶಾಂತಿ, ಸಹಬಾಳ್ವೆ, ಭಯಮುಕ್ತ ವಾತಾವರಣದಲ್ಲಿ ಜೀವಿಸಲು ಮುಕ್ತ ಅವಕಾಶ ಕಲ್ಪಿಸುವುದು ಪಾದಯಾತ್ರೆಯ ಮೂಲ ಉದ್ದೇಶವಾಗಿದೆ ಎಂದು ಮಹಿಮಾ ಪಾಟೀಲ್ ಹೇಳಿದರು.
ಜೊತೆಗೆ ಸಾವಯವ ಕೃಷಿಗೆ ಆದ್ಯತೆ ನೀಡುವುದಲ್ಲದೆ, ಗ್ರಾಮ ಪಂಚಾಯತ್ಗಳನ್ನ ಸಬಲಗೊಳಿಸುವ ಮೂಲಕ ಗ್ರಾಮೀಣ ಮಟ್ಟದಲ್ಲಿ ಉದ್ಯೋಗ ಸೃಷ್ಟಿಸುವಂತೆ ಮಾಡಲಾಗುವುದು ಎಂದರು.