ಕೋಲಾರ: ಕಾರ್ಮಿಕರ ಗಲಭೆಯಿಂದಾಗಿ ಸ್ಥಗಿತಗೊಂಡಿದ್ದ ವಿಸ್ಟ್ರಾನ್ ಕಂಪನಿ ಪುನರಾರಂಭಕ್ಕೆ ಕೆಲಸ ಶುರುವಾಗಿದ್ದು, ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ವಿಸ್ಟ್ರಾನ್ ಕಂಪನಿ ಕಳೆದ ಡಿಸೆಂಬರ್ನಲ್ಲಿ ವೇತನ ಸರಿಯಾಗಿ ನೀಡದ ಕಾರಣ ಕಾರ್ಮಿಕರು ಕಂಪನಿಗೆ ಬೆಂಕಿ ಹಚ್ಚಿ ದಾಂಧಲೆ ನಡೆಸಿದ್ದರು. ಇದಾದ ನಂತರ ಪ್ರಕರಣದಲ್ಲಿ ಭಾಗಿಯಾದವರನ್ನು ಬಂಧಿಸಲಾಗಿತ್ತು. ಜೊತೆಗೆ ಕಂಪನಿಯ ಕೆಲ ಅಧಿಕಾರಿಗಳನ್ನೂ ಕೆಲಸದಿಂದ ತೆಗೆದುಹಾಕಲಾಗಿತ್ತು.
ಇದನ್ನೂ ಓದಿ: ಪ್ರಚಾರದ ವೇಳೆ ಬಂಗಾಳ ಸಿಎಂ ಕಾಲಿಗೆ ಗಾಯ; ಅನುಕಂಪ ಗಿಟ್ಟಿಸುವ ನಾಟಕ ಎಂದ ಬಿಜೆಪಿ
ಹಲವಾರು ಬೆಳವಣಿಗೆಗಳ ನಂತರ ಮತ್ತೆ ಕಂಪನಿ ಪುನರಾರಂಭಕ್ಕೆ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇವತ್ತು ಸಚಿವ ಜಗದೀಶ್ ಶೆಟ್ಟರ್ ವಿಸ್ಟ್ರಾನ್‌ನಲ್ಲಿನ ವ್ಯವಸ್ಥೆಗಳ ಪರಿಶೀಲನೆ ನಡೆಸಿ, ಕೋಲಾರ ಜಿಲ್ಲಾಧಿಕಾರಿ ಸೆಲ್ವಮಣಿ ಹಾಗು ಕಂಪನಿಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದರು.