ಕೋಲಾರ: ಕೆಜಿಎಫ್ನ ಪಾರ್ಕ್ ಜಾಗದಲ್ಲಿರುವ ಅಂಬೇಡ್ಕರ್ ಭವನ ತೆರವು ಮಾಡುವಂತೆ ಹೈಕೋರ್ಟ್ ಆದೇಶ ಹೊರಡಿಸಿದೆ.
ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಅಂಬೇಡ್ಕರ್ ಪಾರ್ಕ್ನಲ್ಲಿ ವೈ.ಸಂಪಂಗಿ ಅವರು ಶಾಸಕರಾಗಿದ್ದ ಅವಧಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಲಾಗಿತ್ತು. ಆದರೆ ಪಾರ್ಕ್ ಜಾಗದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ವಿರೋಧಿಸಿ ಆರ್.ಪಿ.ಐ ಪಕ್ಷದ ಮುಖಂಡರು ಕೋರ್ಟ್ ಮೆಟ್ಟಿಲೇರಿದ್ದರು. ಸದ್ಯ ಭವನ ತೆರವು ಮಾಡುವಂತೆ ಹೈಕೋರ್ಟ್ ಆದೇಶ ನೀಡಿದೆ. ಇನ್ನು ಕೆಜಿಎಫ್ ನಗರಸಭೆಯಿಂದ ಅಂಬೇಡ್ಕರ್ ಭವನ ತೆರವು ಮಾಡದಂತೆ ಹೈಕೋರ್ಟ್ಗೆ ಮನವಿ ಮಾಡಲು ನಿರ್ಧರಿಸಲಾಗಿದೆ.
ಇದನ್ನೂ ಓದಿ: ಶಿವಮೊಗ್ಗ: ಮಲಗಿದ್ದ ತಾಯಿ, ಮಗಳ ಮೇಲೆ ಕುಸಿದ ಗೋಡೆ