ಕೋಲಾರ: ಮುಸ್ಲಿಮರು ಎದ್ದು ಮೋದಿಯನ್ನು ಒದ್ದೋಡಿಸಿ ಎಂಬ ಹೇಳಿಕೆ ನೀಡಿದ್ದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಮಾಜಿ ಸಚಿವ ಹೆಚ್. ವಿಶ್ವನಾಥ್ ಕಿಡಿಕಾರಿದ್ದಾರೆ.
ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಕುಮಾರ್ ಒಬ್ಬ ಸ್ಪೀಕರ್ ಆಗಿದ್ದವರು. ಈ ರೀತಿ ಹೇಳಿಕೆ ನೀಡುವುದು ಖಂಡನೀಯ. ಇದೊಂದು ಜನಾಂಗೀಯ ಘರ್ಷಣೆಗೆ ಅವಕಾಶ ಮಾಡಿಕೊಡುವ ಹೇಳಿಕೆ. ರಮೇಶ್ ಕುಮಾರ್ ಮಾಡೋದೆಲ್ಲ ಅನಾಚಾರ, ಮನೆ ಮುಂದೆ ಬೃಂದಾವನ ಎಂದು ಟಾಂಗ್ ನೀಡಿದ್ರು.
ಇದೇ ವೇಳೆ 17 ಜನರನ್ನು ಪಕ್ಷಾಂತರ ಎಂದು ಅತಂತ್ರ ಮಾಡಿದವರು ರಮೇಶ್ ಕುಮಾರ್, ತಾನು ಜಾತ್ಯಾತೀತ ಎಂದು ಹೇಳಿಕೊಳ್ಳುವ ರಮೇಶ್ ಕುಮಾರ್ ಒಬ್ಬ ದಲಿತ ನಾಯಕ ಕೆ ಹೆಚ್ ಮುನಿಯಪ್ಪನವರನ್ನ ಕಾಂಗ್ರೆಸ್‌ನಲ್ಲಿದ್ದುಕೊಂಡೇ ಸೋಲಿಸಿದ್ದಾರೆ. ನಿಮ್ಗೆ ಪಕ್ಷಾಂತರ ಕಾಯ್ದೆ ಅನ್ವಯವಾಗೋದಿಲ್ವಾ ಎಂದು ಹೆಚ್. ವಿಶ್ವನಾಥ್ ಪ್ರಶ್ನಿಸಿದ್ದಾರೆ. ಸಂವಿಧಾನದ ಬಗ್ಗೆ ಮಾತನಾಡುವ ಅವರು ದಿನವೂ ಸಂವಿಧಾನವನ್ನು ಕೊಲೆ ಮಾಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.