ಕೋಲಾರ: ಹಾಡಹಗಲೇ ನಿವೃತ್ತ ಎಎಸ್ಐ ಮನೆಯಲ್ಲಿ ಕಳ್ಳತನವಾಗಿರುವ ಪ್ರಕರಣ ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಅಕ್ಕಚಕ್ಕಮ್ಮ ಕಲ್ಯಾಣ ಮಂಟಪದ ಹಿಂಭಾಗದ ಮನೆಯಲ್ಲಿ ನಡೆದಿದೆ.
ನಿವೃತ್ತ ಎಎಸ್ಐ ಮಲ್ಲಿಕಾರ್ಜುನಯ್ಯ ಎಂಬುವರ ಮನೆಯಲ್ಲಿ ಕಳ್ಳತನವಾಗಿದೆ. ಕೆಂಪು ಬಣ್ಣದ ಕಾರ್‌ನಲ್ಲಿ ಬಂದ ವ್ಯಕ್ತಿ ಈ ಕೃತ್ಯ ಎಸಗಿದ್ದು, ಸಿಸಿಟಿವಿಯಲ್ಲಿ ಕೃತ್ಯ ಸೆರೆಯಾಗಿದೆ. ಮನೆಯಲ್ಲಿ ಮಹಿಳೆ ಹಾಗೂ ಮಗು ಇಬ್ಬರೇ ಇರುವುದನ್ನ ಗಮನಿಸಿದ ಚಾಲಾಕಿ ಕಳ್ಳ ಹೊಂಚು ಹಾಕಿ ಮನೆಯಲ್ಲಿದ್ದ ಮಹಿಳೆ ಟೆರೇಸ್ ಮೇಲೆ ಬಟ್ಟೆ ಒಣಗಿ ಹಾಕಲು ತೆರಳಿದ್ದ ವೇಳೆ ಮನೆಗೆ ಬಂದು ಕಳ್ಳತನ ಮಾಡಿದ್ದಾನೆ.
ಮನೆಯ ಬೀರುವಿನಲ್ಲಿದ್ದ 30 ಸಾವಿರ ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದು, ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ: ಆಲಮಟ್ಟಿ ಜಲಾಶಯದ ನೀರಿನ ಮಟ್ಟ ಹೆಚ್ಚಳ: ನದಿಪಾತ್ರದ ಜನರಿಗೆ ಎಚ್ಚರಿಕೆ