ETV Bharat / state

ಹಲವಾರು ತಲೆಮಾರುಗಳಿಂದ ಈ ಊರಲ್ಲಿ ಸಂಕ್ರಾಂತಿ ಆಚರಣೆಯೇ ಇಲ್ಲ! - Sankranti celebration

ಕೋಲಾರ ಜಿಲ್ಲೆಯ ಗ್ರಾಮವೊಂದರಲ್ಲಿ ರಾಜರ ಕಾಲದಲ್ಲಿ ಮಾಡಿದ್ದ ಸಂಕ್ರಾಂತಿ ಆಚರಣೆಯ ನಿಷೇಧವನ್ನು ಇಂದಿಗೂ ಗ್ರಾಮಸ್ಥರು ಪಾಲಿಸಿಕೊಂಡು ಬರಲು ಕಾರಣ ತಿಳಿಯಬೇಕೆಂದರೆ ಈ ವರದಿ ನೋಡಿ.

Sankranti
ಸಂಕ್ರಾಂತಿ
author img

By

Published : Jan 14, 2021, 3:04 PM IST

ಕೋಲಾರ: ಈ ಊರಲ್ಲಿ ಸಂಕ್ರಾಂತಿ ಅಂದ್ರೇನೆ ಜನರಿಗೆ ಭಯ. ಸಂಕ್ರಾಂತಿ ಬಂತಂದ್ರೆ ಆ ಹಳ್ಳಿಯಲ್ಲಿ ಸೂತಕದ ವಾತಾವರಣ ನಿರ್ಮಾಣವಾಗುತ್ತದೆ. ಅಕಸ್ಮಾತ್ ಹಬ್ಬಾಚರಣೆ ಮಾಡಿದ್ರೆ ಊರಿಗೇ ಕೇಡಾಗುತ್ತೆ. ದನ-ಕರುಗಳು ಒಂದೊಂದಾಗಿ ಸಾಯುತ್ತವೆ.

ಹೌದು. ಅದು ಬರದ ನಾಡು ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮ. ಈ ಹಳ್ಳಿಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿದೆ. ಈ ಊರಲ್ಲಿ ವಿದ್ಯಾವಂತರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮೂಢನಂಬಿಕೆ ಎಂದೆನಿಸಿದರೂ ಇವರೂ ಕೂಡ ಹಿರಿಯರ ಮಾತನ್ನ ಪಾಲಿಸದೇ ಇರುವುದಿಲ್ಲ.

ಅರಾಭಿಕೊತ್ತನೂರು ಗ್ರಾಮದಲ್ಲಿಲ್ಲ ಸಂಕ್ರಾಂತಿ ಹಬ್ಬ

ಹಿಂದೆಲ್ಲಾ ರಾಜರ ಕಾಲದಲ್ಲಿ ಅರಾಭಿಕೊತ್ತನೂರಿಗೆ ದೊಡ್ಡ ಕಾಯಿಲೆಯೊಂದು ವಕ್ಕರಿಸಿಕೊಂಡು ಊರಲ್ಲಿದ್ದ ದನ-ಕರುಗಳು ಇದ್ದಕ್ಕಿಂದ್ದಂತೆ ಸಾಯೋದಕ್ಕೆ ಶುರುವಾಗಿತ್ತಂತೆ. ಆಗ ದಿಕ್ಕು ತೋಚದಂತಾದ ಊರಿನ ಹಿರಿಯರು ನಡೀತಿರೋ ಅನಾಹುತವನ್ನು ನಿಲ್ಲಿಸುವಂತೆ ಬಸವಣ್ಣನಲ್ಲಿ ಕೋರಿಕೊಂಡರಂತೆ. ಸಂಕ್ರಾಂತಿ ಹಬ್ಬದಲ್ಲಿ ದನ-ಕರುಗಳಿಗೆ ಮಾಡೋ ಪೂಜೆ ಪುನಸ್ಕಾರವನ್ನು ಬೇರೊಂದು ದಿನ ನಿನಗೆ ಮಾಡ್ತೀವಿ ಅಂತಾ ಪ್ರಾರ್ಥನೆ ಮಾಡಿಕೊಂಡ್ರಂತೆ. ಆಗ ರಾಸುಗಳ ಸಾವು ನಿಂತಿದ್ರಿಂದ ಸಂಕ್ರಾಂತಿ ಹಬ್ಬವನ್ನು ಊರಲ್ಲಿ ಮಾಡದಿರುವ ಪ್ರತೀತಿಯು ಅಂದಿನಿಂದಲೂ ಜಾರಿಗೆ ಬಂದಿದೆ.

ಸಂಕ್ರಾಂತಿ ಮುಗಿದ ಮೇಲೆ ಒಂದು ದಿನ ಊರಲ್ಲಿರೋ ಬಸವಣ್ಣನ ದೇವಸ್ಥಾನಕ್ಕೆ ರಾಸುಗಳನ್ನು ಅಲಂಕಾರ ಮಾಡಿಕೊಂಡು ಹೋಗಿ ಪೂಜೆ ಮಾಡಿಸಿಕೊಂಡು ಬರೋದು ಗ್ರಾಮದಲ್ಲಿ ನಡೆದು ಬಂದಿರುವ ಆಚಾರವಾಗಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ಇದನ್ನೂ ಓದಿ: ಹರಜಾತ್ರೆಯಲ್ಲಿ ಸಿಎಂ ಯಡಿಯೂರಪ್ಪ ಭಾಗಿ: ಎಳ್ಳು- ಬೆಲ್ಲ ಹಂಚಿ ಸಂಕ್ರಾಂತಿ ಆಚರಣೆ

ಅರಾಭಿಕೊತ್ತನೂರಿನ ಹಿರಿಯರು ಆ ಕಾಲಕ್ಕೆ ಮಾಡಿದ್ದ ಸಂಕ್ರಾಂತಿ ಆಚರಣೆಯ ನಿಷೇಧಯ ಉದ್ದೇಶ ಒಳ್ಳೆಯದಿರಬಹುದು. ಆದ್ರೆ ಈ ಕಾಲಕ್ಕೂ ಆಧಾರರಹಿತವಾಗಿ ಆ ಪದ್ಧತಿಯನ್ನೇ ಅನುಸರಿಸುತ್ತಾ ಬರ್ತಿರೋದು ಸರೀನಾ ಅನ್ನೋದು ಹೊಸ ತಲೆಮಾರಿನ ಜನರನ್ನು ಕಾಡುವ ಪ್ರಶ್ನೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.