ಕೋಲಾರ: ಜಿಲ್ಲೆಯಾದ್ಯಂತ ನಿರಂತರ ಸುರಿದ ಮಳೆಯಿಂದಾಗಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಟೊಮ್ಯಾಟೋ, ಬೀಟ್ ರೋಟ್, ಕ್ಯಾರೆಟ್, ಹೂಕೋಸು, ಎಲೆ ಕೋಸು, ಸೇರಿದಂತೆ ಹೂವು ಬೆಳೆಗಳು ಹಾನಿಯಾಗಿವೆ. ಇನ್ನು ಬೆಳೆ ಕಳೆದುಕೊಂಡಿರುವ ರೈತರು, ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಈ ನಡುವೆ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಬೆಳೆ ಹಾನಿ ಸರ್ವೆ ಕೂಡಾ ಮಾಡುವ ಕೆಲಸ ಪ್ರಗತಿಯಲ್ಲಿದ್ದು ಈಗಾಗಲೇ ಅಧಿಕಾರಿಗಳು ಲೆಕ್ಕಾಚಾರದ ಪ್ರಕಾರ 1,036 ಹೆಕ್ಟೇರ್ ತೋಟಗಾರಿಕಾ ಪ್ರದೇಶದಲ್ಲಿನ ವಿವಿಧ ಬೆಳೆಗಳು ಹಾನಿಯಾಗಿವೆ. ಪರಿಹಾರ ಪೋರ್ಟಲ್ನಲ್ಲಿ ಈಗಾಗಲೇ ಹಾನಿಯಾದ ಬೆಳೆಗಳನ್ನು ದಾಖಲು ಮಾಡಲಾಗುತ್ತಿದೆ.
ಇನ್ನು ಇಲಾಖೆಯ ಅಂದಾಜಿನ ಪ್ರಕಾರ ಸುಮಾರು 5.8 ಕೋಟಿ ರೂಪಾಯಿಗೂ ಹೆಚ್ಚಿನ ವಿವಿಧ ಬೆಳೆಗಳು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ಮಳೆಯಿಂದ ಬೆಳೆ ಹಾನಿ: ರಾಜಧಾನಿಯಲ್ಲಿ ಸೊಪ್ಪು ತರಕಾರಿ ದರದಲ್ಲಿ ಭಾರಿ ಹೆಚ್ಚಳ