ಕೋಲಾರ: ನಗರದ ಟೇಕಲ್ ರಸ್ತೆ ಬಳಿ ಇರುವ ವೇಣುಗೋಪಾಲ ಪುಷ್ಕರಣಿಯಲ್ಲಿ ಮೀನುಗಳ ಮಾರಣ ಹೋಮ ನಡೆದಿದ್ದು, ಸಾವಿರಾರು ಮೀನುಗಳು ಸಾವನ್ನಪ್ಪಿವೆ.
ವರಮಹಾಲಕ್ಷ್ಮೀ ಹಬ್ಬ ಮುಗಿದ ಬಳಿಕ ಸ್ಥಳೀಯರು ಪೂಜಾ ಸಾಮಗ್ರಿಗಳನ್ನು ಪುಷ್ಕರಣಿಗೆ ಎಸೆದಿದ್ದಾರೆ. ಇದರಿಂದ ಪುಷ್ಕರಣಿಯ ನೀರು ಕಲುಷಿತಗೊಂಡಿದ್ದು, ಅದರಲ್ಲಿದ್ದ ಸಾವಿರಾರು ಮೀನುಗಳು ಸಾವನ್ನಪ್ಪಿವೆ ಎಂದು ಸ್ಥಳೀಯರು ಅರೋಪಿಸಿದ್ದಾರೆ.
ಇನ್ನು ಪುಷ್ಕರಣಿಯಲ್ಲಿ ಮೀನುಗಳ ಪ್ರಮಾಣ ಅಧಿಕವಾಗಿದ್ದು, ಆಮ್ಲಜನಕ ಕೊರತೆಯಿಂದಾಗಿ ಮೀನುಗಳು ಸಾವನ್ನಪ್ಪಿರಬಹುದೆಂದು ಅಂದಾಜಿಸಲಾಗಿದೆ.