ETV Bharat / state

ಗುಜರಿ ಗೋದಾಮಿನಲ್ಲಿ ಅಗ್ನಿ ಅವಘಡ: ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿ - ಕೋಲಾರದ ಗುಜರಿ ಗೋಡನ್​ಗೆ ಅಗ್ನಿ ಅವಘಡ

ಕೋಲಾರ ಜಿಲ್ಲೆಯ ಕೆಜಿಎಫ್ ನಗರದಲ್ಲಿ ಗುಜರಿ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದ ಗೋದಾಮಿಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ.

ಗುಜರಿ ಗೋಡನ್​ನಲ್ಲಿ ಅಗ್ನಿ ಅವಘಡ
Fire found in gujiri godon at Kolar
author img

By

Published : Feb 10, 2020, 10:43 AM IST

Updated : Feb 10, 2020, 3:27 PM IST

ಕೋಲಾರ: ಗುಜರಿ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದ ಗೋದಾಮಿಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ಗುಜರಿ ವಸ್ತುಗಳು ಬೆಂಕಿಗಾಹುತಿಯಾಗಿರುವ ಘಟನೆ ಜಿಲ್ಲೆಯ ಕೆಜಿಎಫ್ ನಗರದ ಎಂ.ಪಿ. ಮಹಲ್ ಬಳಿ ನಡೆದಿದೆ.

ಕೆಜಿಎಫ್​ನ ವೆಂಕಟಾಚಲಪತಿ ಎಂಬುವವರಿಗೆ ಸೇರಿದ ಗುಜರಿ ಗೋದಾಮು ಇದಾಗಿದ್ದು, ಗೋದಾಮಿನ ಬಳಿ ನಿಲ್ಲಿಸಲಾಗಿದ್ದ ಅಪ್ಪೆ ಆಟೋ, ಒಂದು ಕಾರು ಸೇರಿದಂತೆ ಗುಜರಿ ವಸ್ತುಗಳಿಗೆ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ಸಾಮಗ್ರಿಗಳು ಬೆಂಕಿಗಾಹುತಿಯಾಗಿವೆ. ಇದರ ಪಕ್ಕದಲ್ಲಿದ್ದ ಬ್ಯೂಟಿ ಪಾರ್ಲರ್​ಗೂ ಬೆಂಕಿ ತಗುಲಿ ಸಾಕಷ್ಟು ವಸ್ತುಗಳಿಗೆ ಹಾನಿಯಾಗಿದೆ.

ಗುಜರಿ ಗೋಡನ್​ನಲ್ಲಿ ಅಗ್ನಿ ಅವಘಡ

ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದು, ಭಾರಿ ಅನಾಹುತ ತಪ್ಪಿದೆ. ಇನ್ನು ನಗರದ ಮಧ್ಯದಲ್ಲಿ ಗುಜರಿ ಗೋಡೌನ್ ತೆರೆಯಲು ಅವಕಾಶ ನೀಡಿದ ನಗರಸಭೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Last Updated : Feb 10, 2020, 3:27 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.