ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನಿರ್ದೇಕರ ಸ್ಥಾನಕ್ಕೆ ಮತದಾನದ ಪ್ರಕ್ರಿಯೆ ನಡೆಯಿತು. ಈ ವೇಳೆ ಶಾಸಕ ನಂಜೇಗೌಡ ಹಾಗೂ ಮಾಜಿ ಶಾಸಕ ಮಂಜುನಾಥಗೌಡ ನಡುವೆ ಮಾರಾಮಾರಿ ನಡೆಯಿತು.
ಮಾಲೂರು ಶಾಸಕ ಕೆ. ವೈ ನಂಜೇಗೌಡ ಸಹ ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಿಸಿದ್ದು, ತಮ್ಮ ಪರ ಇರುವ ಮತದಾರರನ್ನು ರೆಸಾರ್ಟ್ನಿಂದ ನೇರವಾಗಿ ಮತಕೇಂದ್ರದ ಸ್ಥಳಕ್ಕೆ ಎರಡು ಬಸ್ಗಳಲ್ಲಿ ಕರೆದುಕೊಂಡು ಬಂದರು. ಈ ವೇಳೆ ಮಾಲೂರಿನ ಜೆಡಿಎಸ್ ಮಾಜಿ ಶಾಸಕ ಮಂಜುನಾಥಗೌಡ ಬೆಂಬಲಿಗರೂ ಕುಕ್ಕರ್ ಗುರುತಿಗೆ ಮತ ಎಂದು ಅಣಕಿಸಿ ಕಾಲೆಳೆದರು. ಇದಕ್ಕೆ ಕೆಂಡಾಮಂಡಲರಾದ ಶಾಸಕ ನಂಜೇಗೌಡ ಕಡೆಯವರು ಹಾಗೂ ವಿರೋಧಿ ಬಣಕ್ಕೆ ಮಾರಾಮಾರಿ ಶುರುವಾಗಿಬಿಟ್ಟಿತು. ಕೊನೆಗೆ ಪೊಲೀಸರು ಲಾಠಿ ಚಾರ್ಜ್ ನಡೆಸಿ ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಡಬೇಕಾಯ್ತು.
ಈ ವೇಳೆ ಮಾತನಾಡಿದ ಶಾಸಕ ನಂಜೇಗೌಡ, ಇದು ಮಾಜಿ ಶಾಸಕ ಮಂಜುನಾಥಗೌಡರಿಂದ ನನಗೆ ಕೆಟ್ಟ ಹೆಸರು ತರಲು ಹೊಸಕೋಟೆಯಿಂದ ಜನರನ್ನು ಕರೆದುಕೊಂಡು ಬಂದು ಮಾಡಿರುವ ರೌಡಿಸಂ ಎಂದು ಆರೋಪಿಸಿದರು.…
ಇನ್ನು ಈ ಬಗ್ಗೆ ಮಾತನಾಡಿದ ಮಾಜಿ ಶಾಸಕ ಮಂಜುನಾಥಗೌಡ, ಶಾಸಕ ನಂಜೇಗೌಡ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ಚುನಾವಣೆ ನಡೆಸುತ್ತಿದ್ದಾರೆ. ನಮ್ಮ ಬೆಂಬಲಿಗರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಅದಕ್ಕಾಗಿ ಗಲಾಟೆ ನಡೆದಿದೆ ಎಂದರು. ಮತದಾರರ ಗುರುತಿನ ಚೀಟಿ ಹಾಗೂ ಡೆಲಿಗೇಷನ್ ಫಾರಂ ಕಿತ್ತಿಟ್ಟುಕೊಂಡು ಅವರನ್ನು ಹೆದರಿಸಿ ಓಟು ಹಾಕಿಸಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಮೈತ್ರಿ ಧರ್ಮ ಏನೇ ಇದ್ದರೂ ಲೋಕಸಭಾ ಚುನಾವಣೆಗಷ್ಟೇ ಎಂದರು.