ಕೋಲಾರ: ರೈತರ ಕೃಷಿ ಪಂಪ್ಸೆಟ್ಗಳಿಗೆ, ಯುಎನ್ಪಿಐಪಿ ಯೋಜನೆಯಡಿ ವಿದ್ಯುತ್ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಕೋಲಾರದಲ್ಲಿ ಪ್ರತಿಭಟನೆ ನಡೆಯಿತು.
ಕೋಲಾರ ನಗರದ ಬೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು, ಯುಎನ್ಪಿಐಪಿ ಯೋಜನೆಯಡಿ, ರೈತರ ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಸೌಲಭ್ಯಕ್ಕಾಗಿ, ಜಿಲ್ಲಾದ್ಯಂತ ಸುಮಾರು 800 ಕ್ಕೂ ಅಧಿಕ ರೈತರು ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ ಪ್ರತಿಯೊಬ್ಬರು 26 ಸಾವಿರ ರೂಪಾಯಿಗಳನ್ನ ಪಾವತಿಸಿದ್ದಾರೆ. ಎರಡು ವರ್ಷಗಳು ಕಳೆದರೂ ಸಹ ಕಾಮಗಾರಿ ನಡೆಸದೆ ರೈತರನ್ನ ಕಚೇರಿಗಳಿಗೆ ಅಲೆದಾಡಿಸುತ್ತಿದ್ದಾರೆಂದು ಆರೋಪಿಸಿದರು.
ಅಧಿಕಾರಿಗಳನ್ನ ಕೇಳಿದರೆ ಬಜೆಟ್ನಲ್ಲಿ ಇನ್ನೂ ಬಂದಿಲ್ಲ ಎಂದು ರೈತರಿಗೆ ಉಡಾಫೆ ಉತ್ತರ ನೀಡುವ ಮೂಲಕ ಬೇಜವಾಬ್ದಾರಿ ಹೇಳಿಕೆಗಳನ್ನ ನೀಡುತ್ತಿದ್ದಾರೆಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಮಸ್ಯೆ ಕೂಡಲೇ ಬಗೆಹರಿಸದಿದ್ದರೆ ಅಹೋರಾತ್ರಿ ಧರಣಿ ಮಾಡುವ ಎಚ್ಚರಿಕೆ ನೀಡಿದ್ರು.
ಇದನ್ನೂ ಓದಿ:ಸಿಡಿ ಹಿಂದೆ ಬಿಜೆಪಿ ನಾಯಕರ ಕೈವಾಡನೂ ಇರಬಹುದು: ಯತ್ನಾಳ್ ಬಾಂಬ್!