ETV Bharat / state

ಸೂಕ್ತ ಬೆಲೆ ಸಿಗದ ಹತಾಶೆ: ಎರಡೆಕರೆ ಕ್ಯಾಪ್ಸಿಕಂ ತೋಟ ನಾಶಗೈದ ರೈತ - ಕೊರೊನಾ ಲಾಕ್​ಡೌನ್ ಪರಿಣಾಮ

ಲಾಕ್​ಡೌನ್​ ರೈತರ ಪಾಲಿಗೆ ಅಕ್ಷರಶಃ ದುರಂತವಾಗಿ ಪರಿಣಮಿಸಿದೆ. ಫಸಲು ಚೆನ್ನಾಗಿ ಬಂದಿದ್ದರೂ ಮಾರುಕಟ್ಟೆಯಲ್ಲಿ ಬೆಲೆ ಬಾರದೆ ರೈತ ಕಂಗಾಲಾಗಿದ್ದಾನೆ. ಇಲ್ಲೊಬ್ಬ ರೈತ 2 ಎಕರೆ ಜಮೀನಿನಲ್ಲಿ ಬೆಳೆದಿದ್ದ ಕ್ಯಾಪ್ಸಿಕಂ ಬೆಳೆಯನ್ನು ನಾಶಪಡಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾನೆ.

Farmer destroyed capsicum crop
ಕ್ಯಾಪ್ಸಿಕಂ ತೋಟ
author img

By

Published : May 24, 2021, 9:56 AM IST

ಕೋಲಾರ: ಕೊರೊನಾ ಲಾಕ್​ಡೌನ್ ಪರಿಣಾಮ ರೈತರಿಗೆ ನೇರವಾಗಿ ತಟ್ಟಿದೆ. ಒಂದೆಡೆ, ತಾವು ಬೆಳೆದ ಬೆಳೆಗೆ ಉತ್ತಮ ಬೆಲೆಯೂ ಇಲ್ಲ, ಮತ್ತೊಂದೆಡೆ ಮಾರುಕಟ್ಟೆಯೂ ಇಲ್ಲದೆ ರೈತರು ಹೈರಾಣಾಗಿದ್ದಾರೆ.

ಕ್ಯಾಪ್ಸಿಕಂ ತೋಟ ನಾಶಮಾಡಿದ ರೈತ

ಕೋಲಾರ ತಾಲೂಕಿನ ಚೋಳಘಟ್ಟ ಗ್ರಾಮದ ಚಲಪತಿ ಎಂಬ ರೈತ ತನ್ನ 2 ಎಕರೆ ಜಮೀನಿನಲ್ಲಿ ಬೆಳೆದಿದ್ದ ಕ್ಯಾಪ್ಸಿಕಂ ಬೆಳೆಯನ್ನು ತಾನೇ ನಾಶ ಮಾಡಿದ್ದಾನೆ. ಲಾಕ್​ಡೌನ್ ಸಮಯದಲ್ಲಿ ಸಾಲ ಮಾಡಿ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದ ನೋವಿನಿಂದ ಸುಮಾರು 8 ಲಕ್ಷ ರೂಪಾಯಿ ಮೌಲ್ಯದ ಬೆಳೆಯನ್ನು ಕಿತ್ತೆಸೆದಿದ್ದಾನೆ.

ಸರ್ಕಾರ ಇತ್ತೀಚೆಗೆ ಘೋಷಣೆ ಮಾಡಿದ 10 ಸಾವಿರ ರೂ.ಗಳ ಸಹಾಯಧನವು ರೈತರಿಗೆ ಯಾವುದಕ್ಕೂ ನೆರವಿಗೆ ಬರುವುದಿಲ್ಲ ಎಂದು ಅಳಲು ತೋಡಿಕೊಂಡಿದ್ದಾನೆ.

ಇದನ್ನೂ ಓದಿ: ಬೈಕ್​ ಹಿಡಿಯುವ ಭಯದಲ್ಲಿ ಚೆಕ್‌ಪೋಸ್ಟ್​ ಕೆಳಗೆ ನುಗ್ಗಲು ಯತ್ನ: ಸ್ನೇಹಿತನ ಸಾವಿಗೆ ಕಾರಣವಾದ ಸವಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.