ಕೋಲಾರ: ಕೋಲಾರ ಜಿಲ್ಲೆಯಲ್ಲಿ ಮಳೆ ಅವಾಂತರಗಳು ಮುಂದುವರೆದಿದ್ದು, ನಗರದ ಬಡಾವಣೆಯೊಂದು ಜಲ ದಿಗ್ಬಂದನವಾಗಿದೆ. ಕೋಲಾರದ ಚೌಡೇಶ್ವರಿ ನಗರದಲ್ಲಿ ಜಲ ದಿಗ್ಭಂಧನವಾಗಿದ್ದು, ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಇದರೊಂದಿಗೆ ನಗರದಲ್ಲಿನ ರಸ್ತೆಗಳೆಲ್ಲಾ ಮಳೆ ನೀರಿನಿಂದ ಜಲಾವೃತವಾಗಿದ್ದು, ಕೆಸರು ಗದ್ದೆಗಳಂತಾಗಿವೆ.
ನಗರದಲ್ಲಿರುವ ಗೋಲ್ಡನ್ ಕ್ರಿಕೆಟ್ ಅಕಾಡೆಮಿಯ ನೆಟ್ ಪ್ರ್ಯಾಕ್ಟಿಸ್ ಮೈದಾನವೂ ಸಹ ಸಂಪೂರ್ಣ ಜಲಾವೃತವಾಗಿದ್ದು, ಕ್ರಿಕೆಟ್ ತರಬೇತಿಗೆ ಬರುವ ಆಟಗಾರರು ಪರದಾಡುವಂತಾಗಿದೆ. ಇನ್ನು ಕ್ರಿಕೆಟಿಗರಿಗೆ ಲೆದರ್ ಬಾಲ್ ತರಬೇತಿಯನ್ನು ಈ ಮೈದಾನದಲ್ಲಿ ನೀಡಲಾಗುತ್ತಿದ್ದು, ಮೈದಾನ ಜಲಾವೃತವಾಗಿದೆ. ಸರಿಯಾದ ಡ್ರೈನೇಜ್ ವ್ಯವಸ್ಥೆ ಇಲ್ಲದೆ, ಮಳೆ ನೀರು ಸರಾಗವಾಗಿ ಹರಿದು ಹೋಗಲು ಅವಕಾಶವಿಲ್ಲದೆ ಅವ್ಯವಸ್ಥೆ ಉಂಟಾಗಿದೆ. ಈ ಭಾಗದಲ್ಲಿ ಒತ್ತುವರಿಯಾಗಿರುವ ಪರಿಣಾಮ ಬಡಾವಣೆಯಲ್ಲಿನ ಚೌಡೇಶ್ವರಿ ದೇವಸ್ಥಾನ ಸೇರಿದಂತೆ ಮನೆಗಳಿಗೆ ಜಲ ದಿಗ್ಬಂಧನವಾಗಿದೆ.
ಇದನ್ನೂ ಓದಿ: ಬಾಗಲಕೋಟೆ: ಮಲಪ್ರಭಾ ನದಿ ಪ್ರವಾಹದಿಂದ ಈರುಳ್ಳಿ ಬೆಳೆ ನೀರುಪಾಲು