ಕೋಲಾರ: ಅಬಕಾರಿ ಸಚಿವ ಎಚ್. ನಾಗೇಶ್ ಅವರಿಗೆ ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಕುರಿತು ಮಾಹಿತಿ ಇಲ್ವಂತೆ. ಅಲ್ಲದೆ 25ನೇ ತಾರೀಖು ಕೆಡಿಪಿ ಸಭೆ ಮಾಡಿ ನಂತರ ಮಾಹಿತಿ ಪಡೆದುಕೊಳ್ಳುತ್ತೇನೆ ಅಂತ ಸ್ವತ: ಸಚಿವರೇ ಹೇಳಿದ್ದಾರೆ.
ರಾಜ್ಯದ ಡೆವೆಲಪ್ಮೆಂಟ್ ಕುರಿತು ನನಗೆ ಗೊತ್ತಿಲ್ಲ. ಯಾಕೆಂದ್ರೆ ನಾನು ಟಿವಿ ನೋಡಿಲ್ಲ. ನಿನ್ನೆ ರಾತ್ರಿ ನಾನು ಫಾರ್ಮ್ ಹೌಸ್ನಲ್ಲಿದ್ದೆ. ನಮ್ಮ ಟಿವಿ ಔಟ್ ಆಫ್ ಸರ್ವೀಸ್ನಲ್ಲಿದೆ ಎಂದು ಅಬಕಾರಿ ಸಚಿವ ಎಚ್.ನಾಗೇಶ್ ಬೇಜಬ್ದಾರಿತನ ಹೇಳಿಕೆಯನ್ನು ನೀಡುವ ಮೂಲಕ ನಗೆಪಾಟಲಿಗೆ ಒಳಗಾಗಿದ್ದಾರೆ.
ಕೋಲಾರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುವಾಗ ಮಾಧ್ಯಮದವರು ಸಿಎಂ ಯಡಿಯೂರಪ್ಪ ಸಾಲಮನ್ನಾ ಆಗುವುದಿಲ್ಲ ಅನ್ನುವ ವಿಚಾರ ಹೇಳಿಕೆ ಕುರಿತು ಪ್ರಶ್ನಿಸಿದಾಗ, ನಾನು ನಿನ್ನೆ ರಾತ್ರಿ ಫಾರ್ಮ್ಹೌಸ್ನಲ್ಲಿದೆ. ನಮ್ಮ ಟಿವಿಗೆ ಕರೆನ್ಸಿ ಹಾಕಿಸದ ಕಾರಣ ಔಟ್ ಆಫ್ ಸರ್ವೀಸ್ ಆಗಿತ್ತು ಎಂದರು.
ಅಬಕಾರಿ ಖಾತೆಯಲ್ಲಿ ನಿಮಗೆ ಪೂರ್ಣ ಸ್ವಾತಂತ್ರ್ಯ ನೀಡಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದನ್ನೆಲ್ಲ ನೀವು ಕೇಳಬಾರದು. ನಾನೂ ಹೇಳಬಾರದು. ಅದನ್ನು ಸರ್ಕಾರದ ಬಳಿ ಮಾತನಾಡುವೆ ಎಂದು ಗರಂ ಆದರು. ನಾನು ಈಗ ಆ ವಿಚಾರ ಮಾತನಾಡಿದ್ರೆ ಕಾಂಟ್ರವರ್ಸಿ ಆಗುತ್ತೆ ಎಂದು ತಿಳಿಸಿದ್ರು.
ಇನ್ನು ರಾಜ್ಯದ ಜವಾಬ್ದಾರಿಯುತ ಸಚಿವರಾಗಿ ಮನೆಯಲ್ಲಿ ಟಿವಿಗೆ ಕರೆನ್ಸಿ ಹಾಕಿಲ್ಲ, ಡೆವೆಲಪ್ಮೆಂಟ್ ನೋಡಿಲ್ಲ ಅಂತಾ ಹೇಳಿಕೆ ಕೊಟ್ಟಿರುವುದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದೆ.