ETV Bharat / state

ಸರ್ಕಾರಕ್ಕೆ ಈ ವರ್ಷ ಅಬಕಾರಿ ಸುಂಕದಿಂದಲೇ ₹2500 ಕೋಟಿ ಹೆಚ್ಚುವರಿ ಆದಾಯದ ನಿರೀಕ್ಷೆ.. - corona latest news

ಈಗಾಗಲೇ ಎಂಎಸ್‌ಐಎಲ್ ಹಾಗೂ ಎಂಅರ್‌ಪಿ ಮದ್ಯದಂಗಡಿಗಳು ತೆರೆದಿವೆ. ಮೇ17ರ ನಂತರ ಬೇರೆ ಮದ್ಯದಂಗಡಿಗಳನ್ನೂ ತೆರೆಯುವುದರ ಕುರಿತು ಚಿಂತನೆ ನಡೆದಿದೆ.

Excise charges have been increased for Balance of Govt revenue: Nahgesh
ಸಚಿವ ಎಚ್.ನಾಗೇಶ್
author img

By

Published : May 7, 2020, 3:47 PM IST

ಕೋಲಾರ : ಸರ್ಕಾರದ ಖರ್ಚುಗಳು ಹೆಚ್ಚಾದ ಹಿನ್ನೆಲೆ ಅಬಕಾರಿ ಸುಂಕವನ್ನ ಹೆಚ್ಚಳ‌ ಮಾಡಿರುವುದಾಗಿ ಅಬಕಾರಿ ಸಚಿವ ಹೆಚ್ ನಾಗೇಶ್ ಹೇಳಿದ್ದಾರೆ.

ತೆರಿಗೆ ಹೆಚ್ಚಳ ಕುರಿತಂತೆ ಅಬಕಾರಿ ಸಚಿವ ಹೆಚ್‌ ನಾಗೇಶ್‌ ಮಾಹಿತಿ..

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೇರೆ ರಾಜ್ಯಗಳಲ್ಲಿ ಕೊರೊನಾದಿಂದಾಗಿ ಅಬಕಾರಿ ಸುಂಕವನ್ನ ನಮ್ಮ ರಾಜ್ಯಕ್ಕಿಂತಲೂ ಹೆಚ್ಚಳ ಮಾಡಿದ್ದಾರೆ. ನಮ್ಮ ಸರ್ಕಾರದಲ್ಲೂ ಖರ್ಚುಗಳು ಹೆಚ್ಚಾಗಿವೆ. ಹಾಗಾಗಿ ಸುಂಕ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.

ಲಾಕ್‌ಡೌನ್ ನಂತರ ರಾಜ್ಯದಲ್ಲಿ ಮದ್ಯದಂಗಡಿಗಳನ್ನು ತೆರೆಯಲಾಗಿದೆ. ಮೊದಲ ದಿನದಲ್ಲಿ ತಳ್ಳಾಟ, ನೂಕಾಟ ಮಾಡಿದ್ದು ಹೊರತುಪಡಿಸಿದರೆ, ಮೂರು ದಿನಗಳಲ್ಲಿ ಸುಮಾರು 500 ಕೋಟಿ ಆದಾಯ ಬಂದಿದೆ. ಇಂದಿನಿಂದ ಐದು ಸ್ಲ್ಯಾಬ್‌ಗಳ‌ ಮುಖಾಂತರ ಸುಂಕ ಹೆಚ್ಚಾಗಲಿದೆ ಎಂದರು.

ಈ ವರ್ಷ 22 ಸಾವಿರದ 500 ಕೋಟಿ ಟಾರ್ಗೆಟ್ ಇದ್ದು, ಇದೀಗ ಸುಂಕ ಹೆಚ್ಚಳ ಮಾಡಿರುವುದರಿಂದ ₹2500 ಸಾವಿರ ಕೋಟಿ ಆದಾಯ ಹೆಚ್ಚಳವಾಗುವ ನಿರೀಕ್ಷೆ ಇದೆ. ಈಗಾಗಲೇ ಎಂಎಸ್‌ಐಎಲ್ ಹಾಗೂ ಎಂಅರ್‌ಪಿ ಮದ್ಯದಂಗಡಿಗಳು ತೆರೆದಿವೆ. ಮೇ17ರ ನಂತರ ಬೇರೆ ಮದ್ಯದಂಗಡಿಗಳನ್ನೂ ತೆರೆಯುವುದರ ಕುರಿತು ಚಿಂತನೆ ನಡೆಸುತ್ತೇವೆ ಎಂದು ಮಾಹಿತಿ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.