ಕೋಲಾರ: ಜಿಲ್ಲೆಯಲ್ಲಿ ಕಾಂಗ್ರೆಸ್ ಪಾರ್ಟಿಗೆ ದ್ರೋಹ ಮಾಡಿರುವವರು ಎಂದರೆ ಅದು ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ಎಂದು ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಆರೋಪಿಸಿದರು.
ಕೊತ್ತೂರು ಮಂಜುನಾಥ್ ನಂಬಿಕೆ ದ್ರೋಹ ಮಾಡಿದ್ದಾರೆಂದು ಕೆ.ಹೆಚ್.ಮುನಿಯಪ್ಪ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಮಂಜುನಾಥ್, ನಂಬಿಕೆ ದ್ರೋಹ ಮಾಡಿರುವುದು ಕೆ.ಹೆಚ್.ಮುನಿಯಪ್ಪ, ಪಕ್ಷಕ್ಕೂ ಅವರು ದ್ರೋಹವೆಸಗಿದ್ದಾರೆ. ಏಳು ಬಾರಿ ಸಂಸದರಾಗಿದ್ದ ಅವರು, ಪ್ರತಿಯೊಂದು ವಿಧಾನಸಭೆ ಚುನಾವಣೆಗಳಲ್ಲಿ ಬೇರೊಂದು ಪಕ್ಷಕ್ಕೆ ಮತ ಹಾಕುವ ಮೂಲಕ ಪಕ್ಷ ದ್ರೋಹ ಮಾಡಿದ್ದಾರೆ. ಸಾಕಷ್ಟು ನಿಷ್ಟಾವಂತ ನಾಯಕರನ್ನು ಮುನಿಯಪ್ಪ ಮುಗಿಸಿದ್ದಾರೆ. ಅವರ ರೀತಿ ಒಳಗೊಂದು ಹೊರಗೊಂದು ಕೆಲಸ ನಾವು ಮಾಡುವುದಿಲ್ಲ ಎಂದರು.
ಓದಿ : ನನ್ನ ಜೀವಕ್ಕೆ ಏನಾದ್ರು ಆದ್ರೆ ದಿಂಗಾಲೇಶ್ವರ ಸ್ವಾಮೀಜಿಗಳೇ ಹೊಣೆ: ಶಂಕರಣ್ಣ ಮುನವಳ್ಳಿ
ಮುನಿಯಪ್ಪ ಅವರೊಂದಿಗೆ ರಾಜಿ ಹಾಗೂ ಮುಳಬಾಗಿಲು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಕುರಿತು ಮಾತನಾಡಿ, ಮುಳಬಾಗಿಲಿನಲ್ಲಿ ಅವರು ಅಭ್ಯರ್ಥಿಯಾಗಲಿ. ಆ ಬಳಿಕ ರಾಜಿ ಆಗುತ್ತಾ ಇಲ್ವಾ ಎಂದು ತಿಳಿಯುತ್ತದೆ. ಮುನಿಯಪ್ಪ ಅವರೊಂದಿಗೆ ರಾಜಿ ಆಗುವುದು ಕಷ್ಟ, ಅವರೊಂದಿಗೆ ರಾಜಿ ಆಗುವುದಿಲ್ಲ ಎಂದರು.