ಕೋಲಾರ: ಜಿಲ್ಲೆಯಲ್ಲಿ ಒತ್ತುವರಿಗೊಂಡ ಕೆರೆ ಮತ್ತು ರಾಜಕಾಲುವೆಗಳನ್ನು ತೆರವುಗೊಳಿಸಲು ವಿಶೇಷ ತಂಡ ರಚಿಸುವಂತೆ ಆಗ್ರಹಿಸಿ ಇಂದು ರೈತ ಸಂಘದ ಕಾರ್ಯಕರ್ತರು ಜಿಲ್ಲಾ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು.
ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಮುಳ್ಳು ಗಿಡಗಳನ್ನು ಹಾಕಿ, ಆಗ್ರಹಿಸಿದರು. ಮಳೆ ಬಂದರು ಕೆರೆಗಳಲ್ಲಿ ನೀರು ಸಂಗ್ರಹವಾಗುತ್ತಿಲ್ಲ. ಒತ್ತುವರಿಯಿಂದಾಗಿ ಕೆರೆಗಳು ನಶಿಸಿ ಹೋಗಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಅತಿ ಹೆಚ್ಚು ಕೆರೆಗಳನ್ನು ಹೊಂದಿರುವ ಜಿಲ್ಲೆ ಕೋಲಾರ ಆಗಿದ್ದು, ಕೆರೆಗಳ ರೂಪರೇಷುಗಳೇ ಬದಲಾಗಿದೆ. ನಮ್ಮ ಹಿರಿಯರು ನಮಗೆ ನೀಡಿರುವ ಸ್ವತ್ತುಗಳು ಇದಾಗಿದೆ. ನಾವು ಮುಂದಿನ ಪೀಳಿಗೆಯವರು ಗುರುತಿಸುವಂತೆ ಮಾಡಬೇಕು. ಆದರೆ, ಸ್ವಾರ್ಥ ಮನಸ್ಥಿತಿಗಳಿಂದ ಎಲ್ಲವೂ ನಾಶವಾಗುತ್ತಿದೆ ಎಂದು ದೂರಿದರು.
ಅಲ್ಲದೇ ಈಚೆಗೆ ರಿಯಲ್ ಎಸ್ಟೇಟ್ ಮಾಫಿಯಾದಿಂದ ಕೆರೆಗಳ ಅಸ್ತಿತ್ವ ಕಳೆದುಕೊಳ್ಳುತ್ತಿದ್ದು, ಇಂತಹ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.