ETV Bharat / state

ಕೊರೊನಾ ಭೀತಿ: ಒಂದರಿಂದ ಐದನೇ ತರಗತಿ ನಡೆಸುವಂತಿಲ್ಲ ಎಂದ ಶಿಕ್ಷಣ ಸಚಿವರು - ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿಕೆ

ಒಂದನೇ ತರಗತಿಯಿಂದ ಐದನೇ ತರಗತಿಯವರೆಗೆ ಶಾಲೆಗಳನ್ನು ನಡೆಸುವಂತಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಒಂದು ವೇಳೆ ಸರ್ಕಾರದ ಆದೇಶವನ್ನ ಉಲ್ಲಂಘಿಸಿ ಶಾಲೆ ನಡೆಸಿದ್ದೇ ಆದಲ್ಲಿ, ಅಂತಹವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಡಿಡಿಪಿಐಗಳಿಗೆ ಸೂಚನೆ ನೀಡಲಾಗಿದೆ ಎಂದರು.

education-minister-suresh-kumar
education-minister-suresh-kumar
author img

By

Published : Mar 25, 2021, 3:26 PM IST

ಕೋಲಾರ: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಶುರುವಾಗಿರುವ ಹಿನ್ನೆಲೆ, ಒಂದನೇ ತರಗತಿಯಿಂದ ಐದನೇ ತರಗತಿಯವರೆಗೆ ಶಾಲೆಗಳನ್ನು ನಡೆಸುವಂತಿಲ್ಲ ಎಂದು ಕೋಲಾರದಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿಕೆ ನೀಡಿದ್ರು.

ಇಂದು ಜಿಲ್ಲೆಯ ಮುಳಬಾಗಿಲು ಪಟ್ಟಣದ ಡಿ.ವಿ. ಗುಂಡಪ್ಪ ಶಾಲೆಗೆ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರದ ನಿರ್ಧಾರದಂತೆ ಆರನೇ ತರಗತಿಯಿಂದ ಪ್ರಾರಂಭ ಮಾಡಬೇಕೆಂದು ಹೇಳಿದೆ. ಅದರಂತೆ ಒಂದರಿಂದ ಐದನೇ ತರಗತಿಯವರೆಗೆ ಶಾಲೆಗಳನ್ನು ನಡೆಸುವಂತಿಲ್ಲ, ಈ ಆದೇಶವನ್ನ ಎಲ್ಲಾ ಶಾಲೆಗಳು ಪಾಲಿಸಬೇಕೆಂದು ಹೇಳಿದರು.

1 ರಿಂದ 5ನೇ ತರಗತಿವರೆಗಿನ ಶಾಲೆಗಳನ್ನು ಆರಂಭಿಸುವಂತಿಲ್ಲ ಎಂದ ಶಿಕ್ಷಣ ಸಚಿವರು

ಅಲ್ಲದೆ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿರುವುದು,‌ ಮಕ್ಕಳ ಹಿತಕ್ಕಾಗಿ ಜೊತೆಗೆ ಪೋಷಕರ ಆತಂಕದಿಂದ ಈ‌ ನಿರ್ಧಾರ ತೆಗೆದುಕೊಂಡಿದ್ದೇವೆ. ಹೀಗಾಗಿ ಯಾರೂ ಸಹ ಸರ್ಕಾರದ ಆದೇಶವನ್ನ ಉಲ್ಲಂಘನೆ ಮಾಡಬಾರದು ಎಂದು ತಿಳಿಸಿದರು‌.

ಒಂದು ವೇಳೆ ಸರ್ಕಾರದ ಆದೇಶವನ್ನ ಉಲ್ಲಂಘನೆ ಮಾಡಿ, ಶಾಲೆ ನಡೆಸಿದ್ದೇ ಆದಲ್ಲಿ, ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಡಿಡಿಪಿಐಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಶಾಲಾ ಶುಲ್ಕ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವರು, ಶುಲ್ಕ ಪಾವತಿಸುವುದರ ಕುರಿತಾಗಿ, ಖಾಸಗೀ ಶಾಲೆಯವರು ಕೋರ್ಟ್​ನಲ್ಲಿ ಚಾಲೆಂಜ್ ಮಾಡಿದ್ದಾರೆ. ಹೀಗಾಗಿ ಹೈಕೋರ್ಟ್ ಯಾವ ತೀರ್ಪು ನೀಡುತ್ತದೆ ಎಂಬುದನ್ನು ಕಾದುನೋಡಬೇಕಿದೆ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.