ETV Bharat / state

ಕುಟುಂಬದೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದ ಸಚಿವ ಡಾ.ಕೆ.ಸುಧಾಕರ್

author img

By

Published : Apr 13, 2023, 9:46 PM IST

ಸಚಿವ ಡಾ.ಕೆ.ಸುಧಾಕರ್​ ಅವರು ಕುಟುಂಬಸ್ಥರೊಂದಿಗೆ ಆಗಮಿಸಿ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.

K Sudhakar nomination papers
ಕೆ ಸುಧಾಕರ್ ನಾಮಪತ್ರ ಸಲ್ಲಿಕೆ
ಡಾ.ಕೆ.ಸುಧಾಕರ್​ ಹೇಳಿಕೆ

ಚಿಕ್ಕಬಳ್ಳಾಪುರ (ಕೋಲಾರ) : ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕುಟುಂಬಸ್ಥರೊಂದಿಗೆ ಬಂದು ಇಲ್ಲಿನ ತಾಲೂಕು ಕಚೇರಿಯಲ್ಲಿ ಡಾ.ಕೆ.ಸುಧಾಕರ್ ನಾಮಪತ್ರ ಸಲ್ಲಿಸಿದ್ದಾರೆ. ತಂದೆ ಕೇಶವ ರೆಡ್ಡಿ, ಪತ್ನಿ ಪ್ರೀತಿ ಸುಧಾಕರ್, ಸಹೋದರಿ ಅಶ್ವಿನಿ ಹಾಗೂ ಮಾವ ಆನಂದ್ ಜೊತೆಗಿದ್ದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕೆ.ಸುಧಾಕರ್, ಏಪ್ರಿಲ್ 17ರಂದು ಬೃಹತ್ ಸಂಖ್ಯೆಯಲ್ಲಿ ಪಕ್ಷದ ಬೆಂಬಲಿಗರು ಹಾಗೂ ಕಾರ್ಯಕರ್ತರೊಂದಿಗೆ ರೋಡ್ ಶೋ ನಡೆಸಿ ಮತ್ತೆ ನಾಮಪತ್ರ ಸಲ್ಲಿಸಲಿದ್ದೇನೆ . ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಆಗಲಿ, ಜೆಡಿಎಸ್ ಆಗಲಿ, ಯಾವುದೇ ಅಭ್ಯರ್ಥಿ ನನಗೆ ಪೈಪೋಟಿಯಾಗಿ ಕಾಣುತ್ತಿಲ್ಲ. ಎರಡೂ ಪಕ್ಷಗಳೂ ಸೇರಿ 40,000 ಮತಗಳನ್ನೂ ಪಡೆದುಕೊಳ್ಳುವುದಿಲ್ಲ ಎಂದು ಹೇಳಿದರು.

ಕ್ಷೇತ್ರದಲ್ಲಿ ಮನೆಗೆ ಮಗನಾಗಿ, ಸಹೋದರನಾಗಿ, ಕ್ಷೇತ್ರದ ಅಭಿವೃದ್ದಿಗೆ ಒಬ್ಬ ಚುನಾಯಿತ ಪ್ರತಿನಿಧಿಯಾಗಿ ಏನನ್ನು ಮಾಡಲು ಸಾಧ್ಯವೋ ಅದನ್ನೆಲ್ಲವನ್ನೂ ಹಗಲಿರುಳೆನ್ನದೆ ಮಾಡಿದ್ದೇನೆ. ಇನ್ನೂ ಸಾಕಷ್ಟು ಅಭಿವೃದ್ದಿ ಮಾಡುವಂತಹ ಕೆಲಸಗಳು ಕ್ಷೇತ್ರದಲ್ಲಿವೆ. ಹಾಗಾಗಿ, ಚುನಾವಣೆಯಲ್ಲಿ ಜನರು ನನಗೆ ಆಶೀರ್ವಾದ ಮಾಡುತ್ತಾರೆ ಎಂದರು.

ಇದನ್ನೂ ಓದಿ : ಕ್ಷೇತ್ರ ತ್ಯಾಗಕ್ಕೆ ಸಿದ್ದರಾದ ರಘುನಾಥ ನಾಯ್ಡು; ಡಿ.ಕೆ.ಸುರೇಶ್‌ಗಾಗಿ ಪದ್ಮನಾಭನಗರ ಬಿಟ್ಟು ಕೊಡುವ ಭರವಸೆ

ವರುಣಾ ಮತ್ತು ಕನಕಪುರದಲ್ಲಿ ನಮ್ಮ ಬಿಜೆಪಿ ಅಭ್ಯರ್ಥಿಗಳು ನೂರಕ್ಕೆ ನೂರರಷ್ಟು ಗೆಲುವು ಸಾಧಿಸಲಿದ್ದಾರೆ. ಪ್ರಬಲ ಅಭ್ಯರ್ಥಿಗಳ ವಿರುದ್ಧ ನಿರೀಕ್ಷೆಗೆ ಮೀರಿ ಗೆಲುವು ಪಡೆಯಲಿದ್ದಾರೆ. ವಿ.ಸೋಮಣ್ಣ ಹಾಗೂ ಆರ್.ಅಶೋಕ್ ಸ್ಪರ್ಧೆಯಲ್ಲಿ ಗೆಲ್ಲಲಿದ್ದಾರೆ. ಇವರಿಬ್ಬರ ಮೇಲೆ ವಿಶೇಷವಾದ ನಂಬಿಕೆ ಇಟ್ಟು ಪ್ರಬಲ ಸ್ಪರ್ಧಿಗಳ ವಿರುದ್ದ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿದೆ. ಎರಡರಲ್ಲಿಯೂ ಸಹ ಅಚ್ಚರಿಯ ಫಲಿತಾಂಶ ನೋಡಲಿದ್ದೇವೆ ಎಂದು ತಿಳಿಸಿದರು.

ಖರ್ಗೆ ಸಿಎಂ ಆಗಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿರುವ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಕೆ. ಸುಧಾಕರ್, ಕಾಂಗ್ರೆಸ್​ನಲ್ಲಿ ಸಿಎಂ ಅಭ್ಯರ್ಥಿಗಳು ಏಳೆಂಟು ಜನ ಇದ್ದಾರೆ. ಖರ್ಗೆ ಸಿಎಂ ಆಗಲಿ ಎಂದು ಡಿಕೆಶಿ ಹೇಳಿಕೆ ನೀಡಿದ್ದಾರೆ. ಆದರೆ ಕಾಂಗ್ರೆಸ್ ಯಾವುದೇ ಕಾರಣಕ್ಕೂ 9 ಸೀಟು ಕೂಡಾ ದಾಟುವುದಿಲ್ಲ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ : ದೆಹಲಿಯಿಂದ ವಾಪಸ್​​ ಆಗ್ತಿದ್ದಂತೆ ಬಿಎಸ್​ವೈ ಭೇಟಿ ಮಾಡಿದ ಶೆಟ್ಟರ್​: ಸ್ಪರ್ಧೆ ಬಗ್ಗೆ ಪುನರುಚ್ಚರಿಸಿದ ಮಾಜಿ ಸಿಎಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.