ಕೋಲಾರ: ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಇಂಡಸ್ಟ್ರಿಯಲ್ ಹೊಲಿಗೆ ಯಂತ್ರಗಳ ವಿತರಣಾ ಕಾರ್ಯಕ್ರಮವನ್ನ ಜಿಲ್ಲಾಧಿಕಾರಿ ಜಿ. ಮಂಜುನಾಥ್ ಉದ್ಘಾಟಿಸಿದರು.
ಜವಳಿ ಮತ್ತು ಕೈಮಗ್ಗ ಇಲಾಖೆ ಹಾಗೂ ಸಿ.ಎಸ್. ಅಪರೆಲ್ಸ್ ಸಿದ್ಧ ಉಡುಪುಗಳ ಹೊಲಿಗೆ ತರಬೇತಿ ಕೇಂದ್ರದಿಂದ ಕೋಲಾರ ನಗರದ ಗಲ್‍ಪೇಟೆಯಲ್ಲಿ ಈ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು. ಜವಳಿ ಮತ್ತು ಕೈಮಗ್ಗ ಇಲಾಖೆ ಹಾಗೂ ಸಿ.ಎಸ್. ಅಪರೆಲ್ಸ್ ವತಿಯಿಂದ ಮಹಿಳೆಯರಿಗೆ ತರಬೇತಿ ಈ ಬಗ್ಗೆ ನೀಡಿದ್ದು, ಇದರಲ್ಲಿ ಭಾಗವಹಿಸಿದ್ದ ಸುಮಾರು 40 ಮಹಿಳೆಯರಿಗೆ ಇಂಡಸ್ಟ್ರಿಯಲ್ ಹೊಲಿಗೆ ಯಂತ್ರಗಳನ್ನ ವಿತರಿಸುವುದರ ಜೊತೆಗೆ ಪ್ರಮಾಣಪತ್ರ ನೀಡಲಾಯಿತು.
ಇನ್ನು, ತರಬೇತಿಯಲ್ಲಿ ಭಾಗವಹಿಸಿದ್ದ ಹಲವು ಮಹಿಳೆಯರಿಗೆ ವಿವಿಧ ಬಟ್ಟೆ ಕಾರ್ಖಾನೆಗಳಲ್ಲಿ ತರಬೇತಿ ಕೇಂದ್ರದ ವತಿಯಿಂದಲೇ ಉದ್ಯೋಗವನ್ನ ಕೊಡಿಸಲಾಗಿದೆ.
ಕಾರ್ಯಕ್ರಮದಲ್ಲಿ ಕೋಲಾರ ಶಾಸಕ ಕೆ. ಶ್ರೀನಿವಾಸಗೌಡ, ಇಲಾಖೆ ಅಧಿಕಾರಿಗಳು ಸೇರಿದಂತೆ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು.