ಕೋಲಾರ: ಸೃಷ್ಟಿಯಲ್ಲಿ ಸದಾ ಒಂದಲ್ಲ ಒಂದು ವಿಸ್ಮಯಕಾರಿ ಸಂಗತಿಗಳು ಕಂಡುಬರುತ್ತವೆ. ಅದಕ್ಕೆ ಪೂರಕ ಎಂಬಂತೆ ಜಿಲ್ಲೆಯಲ್ಲಿ ಎರಡು ತಲೆಯ ಮೇಕೆ ಮರಿ ಜನಿಸಿ ಜನರನ್ನ ಚಕಿತಗೊಳಿಸಿದೆ.
ಮಾಲೂರು ತಾಲೂಕಿನ ಟೇಕಲ್ ಹೋಬಳಿಯ ಬಲ್ಲೇರಿ ಗ್ರಾಮದ ನಂಜುಂಡಪ್ಪ ಎಂಬ ರೈತನ ಮನೆಯಲ್ಲಿ ವಿಚಿತ್ರ ಮೇಕೆ ಮರಿಯೊಂದು ಜನಿಸಿದೆ. ಇದು ಎರಡು ತಲೆ, ನಾಲ್ಕು ಕಣ್ಣು ಹಾಗೂ ಒಂದೇ ದೇಹವನ್ನು ಹೊಂದಿದ್ದರಿಂದ ಜನ ನಿಬ್ಬೆರಗಾಗಿ ನೋಡುತ್ತಿದ್ದಾರೆ.
ಈ ವಿಚಿತ್ರ ಮೇಕೆ ಮರಿಯನ್ನು ನೋಡಲು ಗ್ರಾಮಸ್ಥರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಮೇಕೆ ಹಾಗೂ ಮರಿ ಎರಡೂ ಆರೋಗ್ಯವಾಗಿದ್ದು, ಯಾವುದೇ ತೊಂದರೆ ಇಲ್ಲ. ಸದ್ಯ ಈ ಮೇಕೆ ಮರಿ ಜನರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.