ಕೋಲಾರ: ಏಷ್ಯಾದಲ್ಲೇ ಅತಿ ದೊಡ್ಡ ಮಾರುಕಟ್ಟೆ ಎಂಬ ಹೆಗ್ಗಳಿಕೆ ಹೊಂದಿರುವ ಕೋಲಾರ ಎಪಿಎಂಸಿ ಮಾರುಕಟ್ಟೆಗೆ ನೂತನ ಅಧ್ಯಕ್ಷರ ಆಯ್ಕೆ ನಡೆದಿದ್ದು, ಇಂದು ನೂತನ ಎಪಿಎಂಸಿ ಅಧ್ಯಕ್ಷರಾಗಿ ಧನಮಟ್ನಹಳ್ಳಿ ಮಂಜುನಾಥ್ ಅಧಿಕಾರ ಸ್ವೀಕರಿಸಿದರು.
ಇನ್ನು ಕೊರೊನಾ ಸಂದರ್ಭದಲ್ಲಿ ಮಾರುಕಟ್ಟೆಗೆ ರೈತರು ಬರುವುದು ಬೇಡ. ದಿನೇ ದಿನೆ ಕೊರೊನಾದಿಂದ ಸಾವಿನ ಸಂಖ್ಯೆ ಏರುತ್ತಿರುವ ಪರಿಣಾಮ ರೈತರು ಮಾರುಕಟ್ಟೆಗೆ ಬರುವುದು ಬೇಡ . ರೈತರು ಮಾರುಕಟ್ಟೆಗೆ ಬರುವ ಬದಲು ತರಕಾರಿಯನ್ನ ಟೆಂಪೋ ಮೂಲಕ ಮಾರುಕಟ್ಟೆಗೆ ಕಳುಹಿಸಿ. ಕಳುಹಿಸಿರುವ ತರಕಾರಿಗಳಿಗೆ ಆನ್ಲೈನ್ ಮೂಲಕ ರೈತರ ಅಕೌಂಟ್ಗಳಿಗೆ ಹಣ ಕಳಿಸುವ ವ್ಯವಸ್ಥೆಯನ್ನು ನೂತನ ಅದ್ಯಕ್ಷರು ಮಾಡಬೇಕು ಎಂದು ಸಲಹೆ ನೀಡಿದರು.