ETV Bharat / state

ಅಸ್ತಮಾ ರೋಗಿ ಸಾವು... ನೀಲಗಿರಿ ತೋಪಿನಲ್ಲಿ ಶವ ಎಸೆದ ಆಟೋ ಚಾಲಕ

author img

By

Published : Mar 29, 2020, 11:42 AM IST

ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಆಟೋ ಚಾಲಕನೋರ್ವ ನೀಲಗಿರಿ ತೋಪಿನಲ್ಲಿ ಬಿಸಾಕಿ ಹೋಗಿರುವ ಅಮಾನವೀಯ ಘಟನೆ ಕೋಲಾರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

Dead body found on road
ಕೋಲಾರ: ನೀಲಗಿರಿ ತೋಪಿನಲ್ಲಿ ಬಿದ್ದ ಅನಾಥ ಶವ

ಕೋಲಾರ: ತಾಲೂಕಿನ ಕುಡುವನಹಳ್ಳಿ ಗ್ರಾಮದ ಹೊರವಲಯದಲ್ಲಿ ರಸ್ತೆ ಬದಿಯ ನೀಲಗಿರಿ ತೋಪಿನಲ್ಲಿ ವ್ಯಕ್ತಿವೋರ್ವನ ಶವ ಪತ್ತೆಯಾಗಿದೆ.

ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದ ಮುನಿವೆಂಕಟಪ್ಪ ನಿನ್ನೆ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆಂದು ಬಾಡಿಗೆ ಆಟೋದಲ್ಲಿ ತೆರಳಿದ್ದ. ಚಿಕಿತ್ಸೆ ಮುಗಿಸಿಕೊಂಡು ಮನೆಗೆ ಹಿಂದಿರುಗುವಾಗ ಆಟೋದಲ್ಲೇ ಮೃತಪಟ್ಟಿದ್ದಾನೆ. ಈ ವೇಳೆ ಮಾನವೀಯತೆ ಮರೆತ ಆಟೋ‌ ಚಾಲಕ‌, ಮೃತ ಮುನಿವೆಂಕಟಪ್ಪನ ಶವವನ್ನು ರಸ್ತೆ ಬದಿಯಲ್ಲಿರುವ ನೀಲಗಿರಿ ತೋಪಿನಲ್ಲಿ ಬಿಸಾಡಿ ಹೋಗಿದ್ದಾನೆ.

ಕೋಲಾರ: ನೀಲಗಿರಿ ತೋಪಿನಲ್ಲಿ ಬಿದ್ದ ಅನಾಥ ಶವ

ಮುನಿವೆಂಕಟಪ್ಪ ಅವರಿಗೆ ಇಬ್ಬರು ಹೆಂಡತಿಯರಿದ್ದು, ವಿಷಯ ತಿಳಿದರೂ ಸಹ ಗಂಡನ ಮೃತದೇಹವನ್ನ ನೋಡಲು ಬಾರದೆ, ಮೃತ ದೇಹವನ್ನೂ ಪಡೆಯದೆ ಆತನನ್ನ ಅನಾಥವಾಗಿಸಿದ್ದಾರೆ. ಈ ಹಿನ್ನಲೆ ಸ್ಥಳಕ್ಕೆ ಭೇಟಿ ನೀಡಿದ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳೀಯರ ನೆರವಿನಿಂದ ಅಂತ್ಯ ಸಂಸ್ಕಾರ ನಡೆಸಿದ್ದಾರೆ. ಮೃತ ವ್ಯಕ್ತಿಯನ್ನು ಪೊಲೀಸರು ಜನ್ನಘಟ್ಟ ಕೆರೆ ಸಮೀಪ ಜೆಸಿಬಿ ಮುಖಾಂತರ ಹಳ್ಳ ತೆಗೆದು ಅಂತ್ಯಸಂಸ್ಕಾರ ಮುಗಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.