ಕೋಲಾರ: ಡಿ.ಕೆ.ಶಿವಕುಮಾರ್ ನನಗೆ ತಮ್ಮ ಇದ್ದ ಹಾಗೆ, ಅವರಿಗೆ ಜಾಮೀನು ಸಿಕ್ಕಿರುವುದರಿಂದ ನನ್ನ ಮನಸ್ಸಿಗೆ ಸಮಾಧಾನವಾಗಿದೆ ಎಂದು ವಿಧಾನ ಸಭಾ ಮಾಜಿ ಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಾಜಿ ಸಚಿವ ಡಿಕೆಶಿ ಮುಂದಿನ ಕೆಪಿಸಿಸಿ ಅಧ್ಯಕ್ಷರಾಗುತ್ತಾರೆ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದನ್ನು ನಾನು ಹೇಗೆ ಹೇಳಲಿ? ನಾನು ಎಐಸಿಸಿ ಅಧ್ಯಕ್ಷನಾಗಿದ್ದರೆ, ಅವರು ಕೆಪಿಸಿಸಿ ಅಧ್ಯಕ್ಷರಾಗುವುದರ ಕುರಿತು ಹೇಳುತ್ತಿದ್ದೆ ಎಂದರು.
ಇನ್ನು ಮಹಾರಾಷ್ಟ್ರ, ಹರಿಯಾಣ ಚುನಾವಣಾ ಫಲಿತಾಂಶದ ಕುರಿತು ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಮತದಾರರು ದೊಡ್ಡವರು. ಅವರು ಭ್ರಷ್ಟರಲ್ಲ, ನಮಗಿಂತ ಬುದ್ಧಿವಂತರು, ಕಾಲ ಕಾಲಕ್ಕೆ ಯಾರಿಗೆ ಯಾವ ರೀತಿ ಬುದ್ಧಿ ಕಲಿಸಬೆಕೋ ಕಲಿಸುತ್ತಾರೆ. ಅಲ್ಲದೇ ಮತದಾನಕ್ಕೂ ಮಾಧ್ಯಮಗಳ ಸಮೀಕ್ಷೆಗೂ ಸಂಬಂಧವಿಲ್ಲ ಎಂದರು.
ಇನ್ನು ಕಾಂಗ್ರೆಸ್ನ ಇವಿಎಂ ಆರೋಪಕ್ಕೆ ನನ್ನ ಬೆಂಬಲವಿದೆ, ನಮ್ಮ ನಾಯಕರು ಬುದ್ಧಿವಂತರು, ಅನುಭವ ಇರುವಂತಹವರು, ಅವರು ಹೇಳಿದ ಮೇಲೆ ನಿಜ ಆಗಿರುತ್ತದೆ ಎಂದು ರಮೇಶ್ ಕುಮಾರ್ ಹೇಳಿದರು.