ಕೋಲಾರ: ಜಿಲ್ಲೆಯ ಹಲವೆಡೆ ಸುರಿದಿರುವ ಮಳೆಯಿಂದಾಗಿ ರೈತರು ಬೆಳೆದಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆಗಳು ಜಲಾವೃತಗೊಂಡಿವೆ. ಮಳೆನೀರು ಬೆಳೆಗಳಿಗೆ ನುಗ್ಗಿದ ಪರಿಣಾಮ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬೆಳೆಗಳು ಮುಳುಗಡೆಯಾಗಿದೆ.
ತಾಲೂಕಿನ ನರಸಾಪುರ ಹಾಗೂ ವೇಮಗಲ್ ಸುತ್ತಮುತ್ತ ಮಧ್ಯರಾತ್ರಿ ಭಾರಿ ಮಳೆಯಾಗಿದ್ದು ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ರಾಜಕಾಲುವೆ ಹಾಗೂ ಹಳ್ಳಕೊಳ್ಳದ ನೀರು ನೇರವಾಗಿ ರೈತರ ತೋಟಗಳಿಗೆ ನುಗ್ಗಿದ್ದು, ಬೆಳೆ ನಷ್ಟವಾಗಿದೆ.
ಮಳೆ ನೀರಿನೊಂದಿಗೆ ಕೆ.ಸಿ ವ್ಯಾಲಿ ನೀರೂ ಸೇರಿದ್ದು ನರಸಾಪುರ ಸುತ್ತಮುತ್ತಲ ಪ್ರದೇಶದಲ್ಲಿ ಲಕ್ಷಾಂತರ ರೂಪಾಯಿ ಭತ್ತ, ರಾಗಿ, ಟೊಮ್ಯಾಟೋ ಬೆಳೆಗಳು ನೀರಿನಲ್ಲಿ ಮುಳುಗಿದೆ. ಬೆಳೆ ಕಳೆದುಕೊಂಡ ರೈತರು ಸರ್ಕಾರ ಪರಿಹಾರ ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಇದನ್ನೂ ಓದಿ: ಮೊಬೈಲ್ಗಾಗಿ ಕೂಲಿ ಕೆಲಸ ಮಾಡಿದ ಬಾಲಕ: ವಿದ್ಯೆಗಾಗಿ ಭೂಮಿ ನಂಬಿದ ವಿದ್ಯಾರ್ಥಿ