ಕೋಲಾರ: ಖ್ಯಾತ ಕ್ರಿಕೆಟಿಗ ಇರ್ಫಾನ್ ಪಠಾಣ್ ನಗರದ ಖಾಸಗಿ ಆಸ್ಪತ್ರೆಯೊಂದರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿರುವ ವಿಡಿಯೋ ಹರಿದಾಡುತ್ತಿದೆ. ನಗರದ ಡೂಂಲೈಟ್ ಸರ್ಕಲ್ ಬಳಿಯ ಲಕ್ಷ್ಮೀ ಆಸ್ಪತ್ರೆಗೆ ವಿಡಿಯೋ ಮೂಲಕ ಇರ್ಫಾನ್ ಧನ್ಯವಾದ ಹೇಳಿದ್ದಾರೆ.
ವಿಡಿಯೋದಲ್ಲಿ, ಲಕ್ಷ್ಮೀ ಆಸ್ಪತ್ರೆಯ ವೈದ್ಯರಾದ ಡಾ. ಗುಣಶೇಖರ್, ಡಾ. ಜಗಮೋಹನ್, ಡಾ.ರಾಧ ಕಾರ್ಯವೈಖರಿ ಬಗ್ಗೆ ಪಠಾಣ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೋವಿಡ್ ಸೋಂಕಿತರಿಗೆ ಲಕ್ಷ್ಮೀ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ನೀಡಲಾಗ್ತಿದೆ. ಇಲ್ಲಿನ ವೈದ್ಯರು ಹಲವರ ಪ್ರಾಣ ಉಳಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ವೈದ್ಯರು ತಮ್ಮ ಕುಟುಂಬದಿಂದ ದೂರ ಇದ್ದು ಸಾಕಷ್ಟು ಜನರ ಪ್ರಾಣ ಉಳಿಸಿದ್ದಾರೆಂದು ಅವರು ಮಾತನಾಡಿದ್ದಾರೆ.
ತಮ್ಮ ಗೆಳೆಯರಿಗೆ ಕೋವಿಡ್ ಚಿಕಿತ್ಸೆ ನೀಡಿ ಗುಣಪಡಿಸಿದ್ದಕ್ಕೆ ಇರ್ಫಾನ್ ಆಸ್ಪತ್ರೆಯವರಿಗೆ ಧನ್ಯವಾದ ಹೇಳಿರುವುದಾಗಿ ತಿಳಿದು ಬಂದಿದೆ.
ಇದನ್ನೂ ಓದಿ : ಇಗೋ ಬಂತು 'ವ್ಯಾಕ್ಸಿನ್ ಬಸ್'.. ಲಸಿಕೆ ಹಾಕಿಸಿಕೊಳ್ಳಲು ಸಜ್ಜಾಗಿ