ಕೋಲಾರ: ತೀವ್ರ ಅನಾರೋಗ್ಯದಿಂದ ಬೇಸತ್ತ ದಂಪತಿ ಸೈನೈಡ್ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮುಳಬಾಗಿಲು ಪಟ್ಟಣದ ಟೀಚರ್ಸ್ ಕಾಲೊನಿಯಲ್ಲಿ ನಡೆದಿದೆ.
ಬಂಗಾರಪೇಟೆ ಮೂಲದ ಪ್ರಮೀಳ (48) ಹಾಗೂ ರಾಮು (55) ಆತ್ಮ ಹತ್ಯೆಗೆ ಶರಣಾದ ದಂಪತಿ.
ಡಯಾಬಿಟಿಸ್ ಸಮಸ್ಯೆಯಿಂದ ನರಳುತ್ತಿದ್ದ ಪ್ರಮಿಳಾ ಅವರ ಒಂದು ಕಾಲನ್ನು ಕತ್ತರಿಸಿ ತೆಗೆದಿದ್ದ ವೈದ್ಯರು, ಡಯಾಲಿಸಿಸ್ ಮಾಡುವಂತೆ ತಿಳಿಸಿದ್ದರು. ಆದರೆ ಬಡ ದಂಪತಿಗೆ ಚಿಕಿತ್ಸೆ ಮುಂದುವರೆಸಲು ಸಾಧ್ಯವಾಗಿರಲಿಲ್ಲ. ಇದರಿಂದ ಇಬ್ಬರು ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗುತ್ತಿದೆ.
ಈ ಕಾರಣದಿಂದ ತಾವು ವಾಸವಿದ್ದ ಮುಳಬಾಗಿಲಿನ ಸ್ನೇಹಿತ ಮನೆಯಲ್ಲಿ ಸೈನೈಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಳಬಾಗಿಲು ನಗರ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.