ಕೋಲಾರ : ಕೊರೊನಾ ಸೋಂಕು ತಡೆಗೆ ಶ್ರಮಿಸುತ್ತಿರುವ ಕೊರೊನಾ ವಾರಿಯರ್ಸ್ಗೆ ಮೂಲ ಸೌಕರ್ಯಗಳಿಲ್ಲದೆ ಕಳೆದ ರಾತ್ರಿ ಸುರಿದ ಮಳೆಯಿಂದ ಪರದಾಡುವಂತಾಗಿತ್ತು.
ಕೊರೊನಾ ವಿರುದ್ಧ ಜಿಲ್ಲಾಡಳಿತ ಎಲ್ಲಾ ರೀತಿಯಲ್ಲೂ ಹೋರಾಟ ನಡೆಸುತ್ತಿದೆ. ಪೊಲೀಸ್, ಆರೋಗ್ಯ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಜಿಲ್ಲಾ ಗಡಿ ಭಾಗಗಳಲ್ಲಿ ಕೊರೊನಾ ವಾರಿಯರ್ಸ್ ಆಗಿ ಶ್ರಮಿಸುತ್ತಿದ್ದಾರೆ. ಆದರೆ, ಇವರಿಗೆಲ್ಲ ಮೂಲ ಸೌಕರ್ಯಗಳಿಲ್ಲ. ಇದರಿಂದಾಗಿ ಕಳೆದ ರಾತ್ರಿ ಸುರಿದ ಮಳೆಯಿಂದ ಬೆಳಕಿಲ್ಲದೆ, ಸರಿಯಾಗಿ ಕೂರಲೂ ಆಗದೇ ಮಳೆಯಲ್ಲಿಯೇ ಪರದಾಡಿದ್ದಾರೆ.
ಸರಿಯಾದ ಪೆಂಡಾಲ್, ವಿದ್ಯುತ್ ಸಂಪರ್ಕವಿರದೇ ತಮ್ಮನ್ನ ರಕ್ಷಿಸಿಕೊಳ್ಳುವಲ್ಲಿ ಹರಸಾಹಸ ಪಟ್ಟಿದ್ದಾರೆ. ಕೆಜಿಎಫ್ ಜಿಲ್ಲಾ ಪೊಲೀಸ್ ವ್ಯಾಪ್ತಿಯ ರಾಜ್‌ಪೇಟ್ ರೋಡ್, ಕೆಂಪಾಪುರ, ವೆಂಕಟಾಪುರ ಸೇರಿ ಕೋಲಾರ, ಶ್ರೀನಿವಾಸಪುರ, ಮುಳಬಾಗಿಲು ಸೇರಿ ಇನ್ನಿತರ ಗಡಿಯಲ್ಲಿ ಈ ಅವ್ಯವಸ್ಥೆಯಿದೆ.
ಕೊರೊನಾ ಸೋಂಕು ಜಿಲ್ಲೆಗೆ ಬಾರದಂತೆ ಶ್ರಮಿಸುತ್ತಿರುವ ಇವರಿಗೆಲ್ಲ ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿದೆ.