ETV Bharat / state

ಕೋಲಾರಕ್ಕೂ ಲಗ್ಗೆ ಹಾಕಿದ ಕೊರೊನಾ... ಐವರಲ್ಲಿ ಪಾಸಿಟಿವ್​ ಸೋಂಕು! - ಕೊರೊನಾ ವೈರಸ್​

ಮಹಾಮಾರಿ ಕೊರೊನಾ ವೈರಸ್​ ಇದೀಗ ಕೋಲಾರಕ್ಕೂ ಲಗ್ಗೆ ಹಾಕಿದ್ದು, ಒಂದೇ ದಿನ ಐವರಲ್ಲಿ ಈ ಸೋಂಕು ಕಾಣಿಸಿಕೊಂಡಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.

Corona virus in Kolar
Corona virus in Kolar
author img

By

Published : May 12, 2020, 5:57 PM IST

ಕೋಲಾರ: ಡೆಡ್ಲಿ ವೈರಸ್​ ಕೊರೊನಾ ಇದೀಗ ಕೋಲಾರಕ್ಕೂ ಲಗ್ಗೆ ಹಾಕಿದ್ದು, ಇಷ್ಟು ದಿನ ಗ್ರೀನ್​​​ ಝೋನ್​​ನಲ್ಲಿದ್ದ ಸಿಟಿ ಇದೀಗ ರೆಡ್​​ ಝೋನ್​ ಆಗಿ ಮಾರ್ಪಾಡಾಗಿದೆ. ಕಳೆದ 49 ದಿನಗಳಿಂದ ಕೋಲಾರದಲ್ಲಿ ಯಾವುದೇ ಕೊರೊನಾ ಸೋಂಕು ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಗ್ರೀನ್​​ ಝೋನ್​ ಎಂದು ಗುರುತಿಸಲಾಗಿತ್ತು. ಆದರೆ, ಇದೀಗ ಜಿಲ್ಲಾಡಳಿತ ಹಾಗೂ ಜನರಿಗೆ ಒಮ್ಮೆಲೆ ಶಾಕ್​ ನೀಡಿದೆ.

ಕೋಲಾರಕ್ಕೂ ಲಗ್ಗೆ ಹಾಕಿದ ಕೊರೊನಾ

ಕೋಲಾರದ ಮುಳಬಾಗಿಲು ತಾಲೂಕು ವ್ಯಾಪ್ತಿಯಲ್ಲಿ ಬರುವ ಬೂಸಾಲಕುಂಟೆ, ವಿ.ಹೊಸಹಳ್ಳಿ, ಬೆಳಗಾನಹಳ್ಳಿ ಹಾಗೂ ಬೈರಸಂದ್ರ ಗ್ರಾಮದ ಐವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೋಂ ಕ್ವಾರಂಟೈನ್​​ನಲ್ಲಿದ್ದ ಇವರಲ್ಲಿ ಇಬ್ಬರು ಒಡಿಶಾಗೆ ಹೋಗಿ ಬಂದಿರುವ ಲಾರಿ ಚಾಲಕ (27) ಹಾಗೂ ಕ್ಲೀನರ್(21) ಆಗಿದ್ದು, ಉಳಿದಂತೆ ಚೆನ್ನೈ ಮಾರುಕಟ್ಟೆಗೆ ಹೋಗಿ ಬಂದಿರುವ ವ್ಯಕ್ತಿ (22)ವರ್ಷದ ಡ್ರೈವರ್, ಬೆಂಗಳೂರಿನ ಜೆಪಿ‌ ನಗರದಿಂದ ಬಂದಿದ್ದ ಮಹಿಳೆ (70), ಹಾಗೂ ಬೀದರ್- ಹುಮ್ನಾಬಾದ್​ನಿಂದ ಬಂದಿದ್ದ ವಿದ್ಯಾರ್ಥಿನಿ (22)ಗೆ ಕೊರೊನಾ ಸೋಂಕು ತಗುಲಿದೆ.

ಜಿಲ್ಲಾದ್ಯಂತ ಸಾಕಷ್ಟು ಜನರ ಕೋವಿಡ್​ ಪ್ರಕರಣದ ವರದಿ ಬರುವುದು ಬಾಕಿ ಇರುವುದು ಅಲ್ಲಿನ ಜನರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ. ರಾಜ್ಯದಲ್ಲಿ ದಿನ ಕಳೆದಂತೆ ಅತಿ ಹೆಚ್ಚು ಕೊರೊನಾ ಪ್ರಕರಣ ಕಂಡು ಬರುತ್ತಿದ್ದು, ಇಂದು ಒಂದೇ ದಿನ 63 ಕೇಸ್​ಗಳು ಕಾಣಿಸಿಕೊಂಡಿದ್ದು, ಹೀಗಾಗಿ ಒಟ್ಟು ಸೋಂಕಿತರ ಸಂಖ್ಯೆ 925ಕ್ಕೆ ಏರಿಕೆ ಆಗಿದೆ. ಇದರಲ್ಲಿ 433 ಜನರು ಡಿಸ್ಚಾರ್ಜ್​ ಆಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.