ಕೋಲಾರ: ದಕ್ಷಿಣ ಕೋರಿಯಾದಿಂದ ಆಮದು ಮಾಡಿಕೊಂಡ ಕಿಟ್ಗಳ ಮೂಲಕ ಕೇವಲ 20 ನಿಮಿಷದಲ್ಲಿ ಕೋವಿಡ್-19 ಸೋಂಕಿನ ಪರೀಕ್ಷೆ ಮಾಡಲಾಗುತ್ತದೆ. ರಾಜ್ಯದಲ್ಲಿಯೇ ಮೊದಲ ಬಾರಿಗೆ ಅತೀ ವೇಗದ ಪರೀಕ್ಷೆ ನಡೆಸುವ ಕಿಟ್ಗಳ ಪ್ರಾಯೋಗಿಕ ಪರೀಕ್ಷೆಗೆ ಕೋಲಾರ ಜಿಲ್ಲೆ ಮುಂದಾಗಿದೆ.
ಇದರಿಂದ ಸುಮಾರು 6 ಸಾವಿರ ಶಂಕಿತರಿಗೆ ಪರೀಕ್ಷೆ ಮಾಡುವುದಕ್ಕೆ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಸಜ್ಜಾಗಿದೆ. ಈ ಮೂಲಕ ದಕ್ಷಿಣ ಕೋರಿಯಾ ಕಿಟ್ ಮೂಲಕ ಕೋಲಾರದಲ್ಲಿ ಮೊದಲ ಬಾರಿಗೆ ಪ್ರಾಯೋಗಿಕವಾಗಿ ಚಾಲನೆ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಸುಮಾರು 1,500 ಕಿಟ್ಗಳನ್ನ ಕೋಲಾರಕ್ಕೆ ತರಿಸಲಾಗಿದ್ದು, ನಿತ್ಯ ಸುಮಾರು 200 ಮಂದಿಗೆ ಪರೀಕ್ಷೆ ನಡೆಸಲಾಗುವುದು. ಈ ಹಿಂದೆ ರಕ್ತ ಮತ್ತು ಗಂಟಲು ದ್ರವ ಪರೀಕ್ಷೆ ನಡೆಸಲು ಬೆಂಗಳೂರಿಗೆ ಕಳುಹಿಸಬೇಕಾಗಿತ್ತು. ಆಗ 24 ಗಂಟೆಗಳ ಸಮಯ ತೆಗೆದುಕೊಳ್ಳುತ್ತಿತ್ತು.