ಕೋಲಾರ: ಮುಖ್ಯಮಂತ್ರಿ ಯಡಿಯೂರಪ್ಪ ಬಿಜೆಪಿ ಶಾಸಕರನ್ನು ಮಾತ್ರ ಕರೆದು ಬಜೆಟ್ ಕುರಿತು ಚರ್ಚೆ ಮಾಡುತ್ತಿದ್ದಾರೆಂದು ಕಾಂಗ್ರೆಸ್ ಶಾಸಕ ನಂಜೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಕಳೆದ ಮೂರು ದಿನಗಳಿಂದ ಬರೀ ಬಿಜೆಪಿ ಶಾಸಕರನ್ನು ಕರೆದು ಅವರ ಕುಂದು-ಕೊರತೆಗಳನ್ನು ವಿಚಾರಿಸುತ್ತಿದ್ದಾರೆ. ನಾವೆಲ್ಲರೂ ಕರ್ನಾಟಕ ರಾಜ್ಯದ ಶಾಸಕರಾಗಿದ್ದು, ಮುಖ್ಯಮಂತ್ರಿಗಳು ಜಿಲ್ಲಾವಾರು ಪಕ್ಷಾತೀತವಾಗಿ ಶಾಸಕರನ್ನು ಕರೆದು ಚರ್ಚೆ ಮಾಡಬೇಕು.
ಆದರೆ ಮುಖ್ಯಮಂತ್ರಿಗಳು ಬಿಜೆಪಿಯವರನ್ನು ಮಾತ್ರ ಕರೆದು ಚರ್ಚೆ ಮಾಡುತ್ತಿರುವುದು ಬೇಸರದ ಸಂಗತಿ. ಮುಖ್ಯಮಂತ್ರಿಯಾಗಿ ಎಲ್ಲಾ ಶಾಸಕರನ್ನು ಸರಿಸಮನಾಗಿ ಕಾಣಬೇಕು ಎಂದರು.