ETV Bharat / state

ಕೋಲಾರ : ಅರಣ್ಯ ವಲಯ ಒತ್ತುವರಿ ತೆರವು ಕಾರ್ಯಾಚರಣೆ ಕಾನೂನು ಬದ್ಧವಾಗಿದೆ.. ಡಿಎಫ್​ಒ ಏಡುಕೊಂಡಲು - Clearance of encroachment of forest area in Kolar

ಕಳೆದ ಒಂದು ವಾರದಿಂದ ನಡೆಯುತ್ತಿರುವ ಶ್ರೀನಿವಾಸಪುರ ಅರಣ್ಯ ವಲಯ ಒತ್ತುವರಿ ತೆರವು ಕಾರ್ಯಾಚರಣೆ ಕಾನೂನು ಬದ್ಧವಾಗಿದೆ ಎಂಧು ಡಿಎಫ್​​ಒ ಏಡುಕೊಂಡಲು ಹೇಳಿದ್ದಾರೆ.

clearance-of-encroachment-of-forest-area-in-kolar
ಕೋಲಾರ : ಅರಣ್ಯ ವಲಯ ಒತ್ತುವರಿ ತೆರವು ಕಾರ್ಯಾಚರಣೆ ಕಾನೂನು ಬದ್ಧವಾಗಿದೆ
author img

By ETV Bharat Karnataka Team

Published : Aug 30, 2023, 7:24 PM IST

ಡಿಎಫ್​ಒ ಏಡುಕೊಂಡಲು ಮಾಹಿತಿ

ಕೋಲಾರ : ಶ್ರೀನಿವಾಸಪುರ ಅರಣ್ಯ ವಲಯ ಒತ್ತುವರಿ ತೆರವು ಕಾರ್ಯಾಚರಣೆ ಕಾನೂನು ಬದ್ಧವಾಗಿದೆ ಎಂದು ಕೋಲಾರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು ಅವರು ಹೇಳಿದ್ದಾರೆ. ಇದಕ್ಕೂ ಮೊದಲು ಡಿಎಫ್ಒ ನೇತೃತ್ವದಲ್ಲಿ ಇಲ್ಲಿ ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಲಾಗಿತ್ತು.

ಈ ಸಂಬಂಧ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಕಳೆದೊಂದು ವಾರದಿಂದ ಶ್ರೀನಿವಾಸಪುರ ತಾಲೂಕಿನಲ್ಲಿ ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಒಟ್ಟು 560 ಎಕರೆ ಅರಣ್ಯ ಜಾಗವನ್ನು ಒತ್ತುವರಿ ಮಾಡಿಕೊಂಡಿರುವುದು ಸಾಬೀತಾದ ಹಿನ್ನೆಲೆ ಸಂರಕ್ಷಿತ ಅರಣ್ಯ ವಲಯದ ಜಾಗವನ್ನು ವಶಕ್ಕೆ ಪಡೆಯಲು ಅರಣ್ಯ ಇಲಾಖೆ ಮುಂದಾಗಿದೆ ಎಂದು ಹೇಳಿದರು.

ಹಿಂದಿನ ದಾಖಲೆಗಳ ಪ್ರಕಾರ ಭೂ ಮಂಜೂರಾತಿ ಸಮಿತಿಯಲ್ಲಿದ್ದ ಸದಸ್ಯರು ಭೂಗಳ್ಳರೊಂದಿಗೆ ಶಾಮೀಲಾಗಿ ರಾಜ್ಯ ಅರಣ್ಯ ವಲಯದಲ್ಲಿದ್ದ ಜಾಗವನ್ನು ಮೂಲ ಕಡತವನ್ನು ಬದಿಗಿಟ್ಟು ಸಾಗುವಳಿಗಾಗಿ ಮಂಜೂರು ಮಾಡಿದ್ದಾರೆ. ಅರಣ್ಯ ಸಂರಕ್ಷಿತ ವಲಯದ ಜಾಗವನ್ನು ಬೇರೆ ಯಾವುದೇ ಉದ್ದೇಶಗಳಿಗೆ ಬಳಸುವಂತಿಲ್ಲ ಎಂದು ನ್ಯಾಯಾಲಯದ ಆದೇಶ ಹೇಳುತ್ತದೆ. ಗೆಜೆಟ್‌ನಲ್ಲಿ ಘೋಷಣೆಯಾಗಿರುವಂತೆ 4060 ಎಕರೆ ಜಾಗವನ್ನು ಸಂರಕ್ಷಿತ ಅರಣ್ಯವೆಂದು ಘೋಷಿಸಲಾಗಿದೆ. ಈ ಸಂರಕ್ಷಿತ ಅರಣ್ಯ ವಲಯದ ಮೇಲೆ ಕಂದಾಯ ಇಲಾಖೆಗೆ ಯಾವುದೇ ಅಧಿಕಾರ ಇರುವುದಿಲ್ಲ ಎಂದು ತಿಳಿಸಿದರು.

ಅಂತೆಯೇ ಮ್ಯೂಟೇಷನ್ ಮುಖಾಂತರ ದಾಖಲೆಗಳನ್ನು ಸೃಷ್ಟಿಸಲು ಬರುವುದಿಲ್ಲ. ಆದರೆ ಪ್ರಸಕ್ತ ಒತ್ತುವರಿಯಾಗಿರುವ ಜಮೀನಿಗೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಕಳೆದ 30 ವರ್ಷಗಳಿಂದ ಅರಣ್ಯ ಜಮೀನನ್ನು ವಾಣಿಜ್ಯ ಮತ್ತು ವ್ಯವಸಾಯಕ್ಕಾಗಿ ಬಳಸಲಾಗುತ್ತಿದೆ. ಸಂರಕ್ಷಿತ ಅರಣ್ಯ ವಲಯದ ಜಮೀನನ್ನು ಕೇವಲ ಅರಣ್ಯ ಇಲಾಖೆ ಮಾತ್ರ ಪರಭಾರೆ ಮಾಡಲು ಹಕ್ಕಿದೆ ಎಂದು ಡಿಎಫ್​ಒ ಮಾಹಿತಿ ನೀಡಿದರು.

ಈ ಒತ್ತುವರಿ ತೆರವು ವಿಚಾರದ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಉಚ್ಛ ನ್ಯಾಯಾಲಯವು ಅರಣ್ಯ ಒತ್ತುವರಿಯನ್ನು ಅಗತ್ಯವಾಗಿ ತೆರವುಗೊಳಿಸಬೇಕೆಂದು ತೀರ್ಪನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ 23ರಿಂದ ಅರಣ್ಯ ಒತ್ತುವರಿಯನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಒತ್ತುವರಿಯಾಗಿದ್ದ ಜಮೀನುಗಳಲ್ಲಿ ವಾಣಿಜ್ಯೋದ್ದೇಶಗಳಿಗಾಗಿ ಮಾವು, ತರಕಾರಿ ಹಾಗೂ ಟೊಮೊಟೊ ಮತ್ತು ಇನ್ನಿತರೆ ವಾಣಿಜ್ಯ ಬೆಳೆಗಳನ್ನು ಬೆಳೆದಿದ್ದು, ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ. ತೆರವುಗೊಳಿಸಲಾದ ಪ್ರದೇಶದಲ್ಲಿ ಗಿಡ ನೆಡುವ ಕಾರ್ಯವು ಮುಂದುವರೆದಿದೆ ಎಂದು ಹೇಳಿದರು.

ಒತ್ತುವರಿ ತೆರವು ಬಗ್ಗೆ ಈಗಾಗಲೇ ಸಾಕಷ್ಟು ಬಾರಿ ನೋಟಿಸ್​ಗಳನ್ನು ನೀಡಲಾಗಿದೆ. ಆದರೆ ಅದ್ಯಾವುದಕ್ಕೂ ಸೂಕ್ತ ಉತ್ತರಗಳು ಬಾರದ ಕಾರಣ ಹಾಗೂ ಈಗಾಗಲೇ 2020ರಲ್ಲಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ರೈತರ ವಶದಲ್ಲಿದ್ದ ಜಮೀನನ್ನು ಅರಣ್ಯ ಇಲಾಖೆಗೆ ವಾಪಸ್ ಮಾಡಲು ಮನವಿ ಮಾಡಲಾಗಿದೆ. ಆದಾಗ್ಯೂ ಯಾವುದೇ ಪ್ರತಿಕ್ರಿಯೆ ದೊರಕದ ಕಾರಣ ಮುಂದಿನ ಪೀಳಿಗೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಹಾಗೂ ಅರಣ್ಯದ ಹಸಿರನ್ನು ಕಾಪಿಟ್ಟುಕೊಳ್ಳುವ ದೃಷ್ಟಿಯಿಂದ ಒತ್ತುವರಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಡಿಎಫ್​ಒ ಏಡುಕೊಂಡಲು ವಿವರಿಸಿದರು.

ಇದನ್ನೂ ಓದಿ : ಕೋಲಾರ: ಅರಣ್ಯ ಇಲಾಖೆಯಿಂದ ಒತ್ತುವರಿ ತೆರವು ಕಾರ್ಯಾಚರಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.