ETV Bharat / state

ಕೋಲಾರ: ಮಾಲೂರು ಪುರಸಭೆ ಚುನಾವಣೆಯ ಮತ ಎಣಿಕೆ ವೇಳೆ ಕೈ-ಕಮಲ ಜಟಾಪಟಿ! - ಮಾಲೂರು ಪುರಸಭೆ ಚುನಾವಣೆಯ ಮತ ಎಣಿಕೆ

ಬಿಜೆಪಿ ಸದಸ್ಯರ ಕಾರು ಮಾಲೂರಿನ ಮತಗಟ್ಟೆ ಬಳಿ ಹೋಗುತ್ತಿದ್ದಂತೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ.

clash between congress and bjp activists at kolar
ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಜಟಾಪಟಿ
author img

By

Published : Dec 30, 2021, 1:56 PM IST

Updated : Dec 30, 2021, 2:05 PM IST

ಕೋಲಾರ: ಕೋಲಾರ ಜಿಲ್ಲೆಯ ಮಾಲೂರು ಪುರಸಭೆ ಚುನಾವಣೆಯ ಮತ ಎಣಿಕೆ ವೇಳೆ ಇಲ್ಲಿನ ಮತಗಟ್ಟೆ ಬಳಿ ಬಿಜೆಪಿ ಮತ್ತು ಕಾಂಗ್ರೆಸ್​ ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿದೆ. ಬಿಜೆಪಿ ಸದಸ್ಯರ ಕಾರು ಮತಗಟ್ಟೆ ಬಳಿ ಬರುತ್ತಿದ್ದಂತೆಯೇ ಗಲಾಟೆ ಆರಂಭವಾಯಿತು.

ಮತ ಎಣಿಕೆ ವೇಳೆ ಕೈ-ಕಮಲ ಜಟಾಪಟಿ

ಬಿಜೆಪಿ ಸದಸ್ಯರಾದ ಭಾಗ್ಯಮ್ಮ,‌ ಸುಮಿತ್ರಾ ಅವರಿದ್ದ ಕಾರು ಮತಗಟ್ಟೆ ಬಳಿ ಹೋಗುತ್ತಿದ್ದಂತೆ, ಕಾರಿನ ಗಾಜು ಒಡೆದು ಗಲಾಟೆ ಆರಂಭಿಸಿದರು. ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ ಜೋರಾಗಿ, ಕೈ-ಕೈ ಮಿಲಾಯಿಸುವ ಹಂತಕ್ಕೆ ಹೋಯಿತು. ಪೊಲೀಸರು ತಕ್ಷಣ ಲಘು ಲಾಠಿ ಪ್ರಹಾರ ಮಾಡಿ, ಪರಿಸ್ಥಿತಿ ನಿಯಂತ್ರಿಸಿದರು. ಈ ವೇಳೆ ಪೊಲೀಸರ ವಿರುದ್ಧ ಕಾಂಗ್ರೆಸಿಗರು ಧಿಕ್ಕಾರ ಕೂಗಿದರು.

ಇದನ್ನೂ ಓದಿ: ವಿಜಯಪುರ: 6 ಪ.ಪಂಚಾಯಿತಿಗಳ ಪೈಕಿ 3 ಕಾಂಗ್ರೆಸ್ ತೆಕ್ಕೆಗೆ, ಉಳಿದವು?

Last Updated : Dec 30, 2021, 2:05 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.