ಕೋಲಾರ : ಎಲ್ಲೆಡೆ ಕೊರೊನಾ ವೈರಸ್ ಭೀತಿಯಿಂದಾಗಿ ಇಡೀ ದೇಶವೇ ಲಾಕ್‌ಡೌನ್ ಆಗಿದೆ. ನಗರದಲ್ಲಿ ಮಾಂಸದಂಗಡಿಗಳಿಗೆ ಮಾತ್ರ ಯಾವುದೇ ಲಾಕ್‌ಡೌನ್ ಇಲ್ಲದೆ ವ್ಯಾಪರ ನಡೆಯುತ್ತಿರುವ ದೃಶ್ಯ ಕಂಡು ಬಂದಿತು.
ಭಾನುವಾರದ ಹಿನ್ನೆಲೆ ಇಂದು ನಗರದ ಪ್ರಮುಖ ಬೀದಿಗಳಲ್ಲಿ ತೆರೆಯಲಾಗಿದ್ದ ಮಾಂಸದಂಗಡಿಗಳ ಬಳಿ ಜನಸಂದಣಿ ಇರುವುದು ಕಂಡು ಬಂತು. ಲಾಕ್‌ಡೌನ್ ಇದ್ರೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಮಾಂಸ ಕೊಳ್ಳುವ ಆತುರದಲ್ಲಿ ಜನ ಅಂಗಡಿಗಳ ಮುಂದೆ ಗುಂಪು ಗುಂಪಾಗಿದ್ದರು. ವಿಷಯ ತಿಳಿದು ಸ್ಥಳಕ್ಕೆ ಭೇಟಿ ಮಾಡಿದ ನಗರಸಭೆ ಆಯುಕ್ತ ಶ್ರೀಕಾಂತ್, ಮಾಂಸದಂಗಡಿ ಮಾಲೀಕರಿ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಮಾಂಸದಂಗಡಿಯೊಳಗೆ ಇದ್ದ ಜನರನ್ನ ಹೊರಗೆ ಕಳುಹಿಸಿ ಅಂಗಡಿಗಳನ್ನು ಮುಚ್ಚಿಸುವ ಮೂಲಕ ಅಂಗಡಿ ಮಾಲೀಕರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಇದೇ ವೇಳೆ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕವರ್ಸ್ ಕಂಡು ಬಂದ ಹಿನ್ನೆಲೆ ಮಾಲೀಕರಿಗೆ ಎಚ್ಚರಿಕೆ ನೀಡುವ ಮೂಲಕ ಅಂಗಡಿಗಳಲ್ಲಿದ್ದ ಪ್ಲಾಸ್ಟಿಕ್ ಕವರ್‌ಗಳನ್ನ ವಶಪಡಿಸಿಕೊಂಡರು.