ETV Bharat / state

ಬಿಜೆಪಿ ನಾಯಕರಿಂದ ಅಧಿಕಾರಿಗಳ ಬ್ಲಾಕ್ ಮೇಲ್: ಕಾಂಗ್ರೆಸ್ ಶಾಸಕ ಆರೋಪ - Congress MLA Nanjegowda

ಜಿಲ್ಲೆಯಲ್ಲಿ ಬಿಜೆಪಿಯ ಜನಪ್ರತಿನಿಧಿಗಳು ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ. ಅಲ್ಲದೇ ಇಷ್ಟು ಅಂತ ಪರ್ಸಂಟೇಜ್ ಫಿಕ್ಸ್ ಮಾಡಿಕೊಂಡಿದ್ದಾರೆ. ಅನಿವಾರ್ಯವಾಗಿ ಅಧಿಕಾರಿಗಳು ಈ ಜನಪ್ರತಿನಿಧಿಗಳಿಗೆ ಶರಣಾಗುತ್ತಿದ್ದಾರೆ ಎಂದು ಶಾಸಕ ಕೆ.ವೈ. ನಂಜೇಗೌಡ ಆಪಾದಿಸಿದರು.

ಕಾಂಗ್ರೆಸ್ ಶಾಸಕ ಕೆ. ವೈ. ನಂಜೇಗೌಡ
ಕಾಂಗ್ರೆಸ್ ಶಾಸಕ ಕೆ. ವೈ. ನಂಜೇಗೌಡ
author img

By

Published : May 22, 2020, 5:38 PM IST

ಕೋಲಾರ: ಬಿಜೆಪಿ ನಾಯಕರು ಅಧಿಕಾರಿಗಳನ್ನ ಬ್ಲಾಕ್ ಮೇಲ್ ಮಾಡಿ, ಜಿಲ್ಲೆಯಲ್ಲಿ ಅಧಿಕಾರ ನಡೆಸುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್. ನಾಗೇಶ್ ಮತ್ತು ಸಂಸದ ಎಸ್. ಮುನಿಸ್ವಾಮಿ ವಿರುದ್ಧ ಪರೋಕ್ಷವಾಗಿ ಶಾಸಕ ಕೆ.ವೈ. ನಂಜೇಗೌಡ ವಾಗ್ದಾಳಿ ನಡೆಸಿದರು.

ಶಾಸಕ ಕೆ. ವೈ. ನಂಜೇಗೌಡ ವಾಗ್ದಾಳಿ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬಿಜೆಪಿಯ ಜನಪ್ರತಿನಿಧಿಗಳು ಅಧಿಕಾರಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ. ಅಲ್ಲದೇ ಇಷ್ಟು ಅಂತ ಪರ್ಸಂಟೇಜ್ ಫಿಕ್ಸ್ ಮಾಡಿಕೊಂಡಿದ್ದಾರೆ. ಅನಿವಾರ್ಯವಾಗಿ ಅಧಿಕಾರಿಗಳು ಈ ಜನಪ್ರತಿನಿಧಿಗಳಿಗೆ ಶರಣಾಗುತ್ತಿದ್ದಾರೆ. ಅಧಿಕಾರ ಶಾಶ್ವತವಲ್ಲ. ಅಧಿಕಾರ ಸಿಕ್ಕಾಗ ಯಾರೇ ಆಗಲಿ ಪಕ್ಷಾತೀತವಾಗಿ ಜನ ಮೆಚ್ಚುವಂತಹ ಕೆಲಸ ಮಾಡಬೇಕು ಎಂದು ಹೇಳಿದರು.

ಇನ್ನು ನಾವು ಗೆದ್ದಿದ್ದೇವೆ. ಶಾಶ್ವತವಾಗಿ ನಾವೇ ಅಧಿಕಾರದಲ್ಲಿ ಇರುತ್ತೇವೆ ಎನ್ನುವ ರೀತಿಯಲ್ಲಿ ಬಿಜೆಪಿ ನಾಯಕರು ವರ್ತಿಸುತ್ತಿದ್ದಾರೆ. ಇವರಿಗೆ ಗಾಳಿಯಲ್ಲಿ ಅಧಿಕಾರ ಬಂದಿದೆ. ಅದನ್ನ ಗಾಳಿಯಲ್ಲಿ ಕಳೆದುಕೊಳ್ಳಬಾರದು ಎಂದು ಸಲಹೆ ನೀಡುತ್ತೇನೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.