ETV Bharat / state

ಕೆಲಸಕ್ಕೆ ಬರುವಂತೆ ಬೆಮೆಲ್​ ಬುಲಾವ್: ಕಾರ್ಮಿಕರನ್ನು ವಾಪಸ್​ ಕಳಿಸಿದ ಪೊಲೀಸರು

author img

By

Published : Apr 15, 2020, 12:47 PM IST

Updated : Apr 15, 2020, 1:10 PM IST

ಕಾರ್ಮಿಕರಿಗೆ ಕೆಲಸಕ್ಕೆ ಹಾಜರಾಗುವಂತೆ ಬೆಮಲ್​ ಕರೆ ನೀಡಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಕಾರ್ಮಿಕರನ್ನು ಮರಳಿ ಮನೆಗೆ ಕಳುಹಿಸಿದ್ದಾರೆ.

BEML call to labors for work in KolarBEML call to labors for work in Kolar
ಕೆಲಸಕ್ಕೆ ಬರುವಂತೆ ಬೆಮೆಲ್​ ಬುಲಾವ್

ಕೋಲಾರ: ಬೆಮೆಲ್ ಕಾರ್ಖಾನೆಗೆ ಕೆಲಸಕ್ಕೆ ಬರುವಂತೆ ಕಾರ್ಮಿಕರಿಗೆ ಬುಲಾವ್ ನೀಡಿದ್ದ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು ಕಾರ್ಮಿಕರನ್ನ ವಾಪಸ್ ಕಳುಹಿಸಿದ್ದಾರೆ‌.

ಕಾರ್ಮಿಕರನ್ನು ವಾಪಸ್​ ಕಳಿಸಿದ ಪೊಲೀಸರು

ಜಿಲ್ಲೆಯ ಕೆಜಿಎಫ್​ನಲ್ಲಿರುವ ಬೆಮೆಲ್ ಕಾರ್ಖಾನೆಯವರು ಕಾರ್ಮಿಕರು ಕೆಲಸಕ್ಕೆ ಬರುವಂತೆ ಹೇಳಿದ್ದರು. ಅದರಂತೆ ಇಂದು ಬೆಳಗ್ಗೆ ಕಾರ್ಖಾನೆಗೆ ಬಂದಂತಹ ಕಾರ್ಮಿಕರನ್ನ ಪೊಲೀಸರು ವಾಪಸ್ ಮನೆಗೆ ಕಳುಹಿಸಿದರು. ಜಿಲ್ಲಾಡಳಿತದಿಂದ ಅನುಮತಿ ಪಡೆಯದೆ ಕಾರ್ಖಾನೆ ಆರಂಭಿಸಲು ಮುಂದಾದ ಹಿನ್ನೆಲೆ ಜಿಲ್ಲಾಡಳಿತದ ವತಿಯಿಂದ ಕಾರ್ಖಾನೆ ತೆರೆಯದಂತೆ ಮೌಖಿಕ ಆದೇಶ ನೀಡಲಾಗಿದೆ.

ಕೇಂದ್ರ ಸರ್ಕಾರದ ಒಡೆತನದಲ್ಲಿರುವ ಬೆಮೆಲ್ ಕಾರ್ಖಾನೆ, ಅನುಮತಿ ಪಡೆಯುವ ಮೊದಲೇ ಕಾರ್ಮಿಕರ‌ನ್ನ ಕೆಲಸಕ್ಕೆ ಬರುವಂತೆ ಬುಲಾವ್ ನೀಡಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

Last Updated : Apr 15, 2020, 1:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.