ETV Bharat / state

ಬಂಗಾರಪೇಟೆ: ಪರವಾನಗಿ ಇಲ್ಲದೆ ನಡೆಸುತ್ತಿದ್ದ ನಕಲಿ ಕ್ಲಿನಿಕ್ ಸೀಜ್ ಮಾಡಿದ ತಹಶೀಲ್ದಾರ್ - ನಕಲಿ ಕ್ಲಿನಿಕ್ ಸೀಜ್

ಕಾನೂನುಬಾಹಿರವಾಗಿ ಬಂಗಾರಪೇಟೆಯಲ್ಲಿ ನಡೆಸುತ್ತಿದ್ದ ಕ್ಲಿನಿಕ್​ ಅನ್ನು ಅಧಿಕಾರಿಗಳು ಸೀಜ್​ ಮಾಡಿದ್ದಾರೆ.

ನಕಲಿ ಕ್ಲಿನಿಕ್ ಸೀಜ್
ನಕಲಿ ಕ್ಲಿನಿಕ್ ಸೀಜ್
author img

By ETV Bharat Karnataka Team

Published : Oct 19, 2023, 10:51 PM IST

ಕೋಲಾರ: ನಕಲಿ ಕ್ಲಿನಿಕ್​ ಮೇಲೆ ಅಧಿಕಾರಿಗಳು ದಾಳಿ ಮಾಡಿ ಸೀಜ್ ಮಾಡಿರುವ ಘಟನೆ ಕೋಲಾರದ ಬಂಗಾರಪೇಟೆಯಲ್ಲಿ ಗುರುವಾರ ನಡೆದಿದೆ. ಬಂಗಾರಪೇಟೆ ತಹಶೀಲ್ದಾರ್ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿಗಳು ಬಂಗಾರಪೇಟೆ ಪಟ್ಟಣದ ಕೆಜಿಎಫ್ ಮುಖ್ಯರಸ್ತೆಯ ದೇಶಿಹಳ್ಳಿಯಲ್ಲಿ ನಕಲಿಯಾಗಿ ನಡೆಸಲಾಗುತ್ತಿದ್ದ ಪ್ರಗತಿ ಕ್ಲಿನಿಕ್ ಜಪ್ತಿ ಮಾಡಿದರು.

ಯಾವುದೇ ಪರವಾನಗಿ ಇಲ್ಲದೆ ಕ್ಲಿನಿಕ್ ನಡೆಸುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಕಳೆದ ಮೂರು ವಾರಗಳಿಂದ ತನಿಖೆ ಮಾಡಲಾಗಿತ್ತು. ಇದೀಗ ಡಾ.ರಜನಿಕಾಂತ್ ಎಂಬವರಿಗೆ ಸೇರಿದ ಈ ನಕಲಿ ಕ್ಲಿನಿಕ್‌ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗಿದೆ. ಕ್ಲಿನಿಕ್‌ ನಡೆಸುತ್ತಿರುವ ವ್ಯಕ್ತಿಯ ಬಳಿ ಪರವಾನಗಿ ಇಲ್ಲ. ಇದೇ ವೈದ್ಯರು ಈ ಹಿಂದೆಯೂ ಒಮ್ಮೆ ಕೆಜಿಎಫ್​ನಲ್ಲಿ ನಕಲಿ ಕ್ಲಿನಿಕ್​ ನಡೆಸುತ್ತಿರುವಾಗ ಸೀಜ್ ಆಗಿ ಇನ್ನು ಮುಂದೆ ಕ್ಲಿನಿಕ್ ತೆರೆಯುವುದಿಲ್ಲ ಎಂದು ಜಿಲ್ಲಾಧಿಕಾರಿಗಳಿಗೆ ಹೇಳಿಕೆ ನೀಡಿದ್ದರು.

ಈ ಘಟನೆಯ ಬಳಿಕ ಇಲ್ಲಿ ಬಂದು ಮತ್ತೊಮ್ಮೆ ಕ್ಲಿನಿಕ್ ಮಾಡುತ್ತಿರುವ ಮಾಹಿತಿ ಸಿಕ್ಕಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ಕ್ಲಿನಿಕ್​ ಪರಿಶೀಲಿಸಿದಾಗ ಔಷಧ ಇಟ್ಟುಕೊಂಡು ಚಿಕಿತ್ಸೆ ನೀಡಲಾಗುತ್ತಿತ್ತು. ಹೈಕೋರ್ಟ್ ಆದೇಶದಂತೆ ಪರವಾನಗಿ ಇಲ್ಲದೆ ಕ್ಲಿನಿಕ್​ ತೆರೆಯುವಂತಿಲ್ಲ. ನೋಂದಾಯಿತ ವೈದ್ಯರಲ್ಲ. ಕೆಪಿಎಂಇ ನೋಂದಣಿ ಕೂಡ ಇವರ ಬಳಿ ಇರಲಿಲ್ಲ. ನಕಲಿ ಕ್ಲಿನಿಕ್​ ತೆರೆಯುವವರ ಬಗ್ಗೆ ಅಂಗಡಿ ಬಾಡಿಗೆಗೆ ಕೊಡುವವರೂ ಎಚ್ಚರವಹಿಸಬೇಕು. ದಾಖಲೆಗಳನ್ನು ಪರಿಶೀಲಿಸಿ ನೋಂದಾಯಿತ ವೈದ್ಯರಿಗೆ ಮಾತ್ರ ಬಾಡಿಗೆಗೆ ಕೊಡಬೇಕು ಎಂದು ಮಾಲೀಕರಿಗೆ ಅಧಿಕಾರಿಗಳ ತಂಡ ಸಲಹೆ ನೀಡಿದೆ.

ತಾಲೂಕಿನಾದ್ಯಂತ ಎಲ್ಲೆಲ್ಲಿ ನಕಲಿ ಕ್ಲಿನಿಕ್​ಗಳನ್ನು ನಡಸಲಾಗುತ್ತಿದೆಯೋ ಅವರಿಗೆಲ್ಲ ಇದು ಎಚ್ಚರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಎಲ್ಲೆಡೆ ಪರಿಶೀಲನೆ ನಡೆಸಿ ಕ್ಲಿನಿಕ್​ಗಳ ಮೇಲೆ ಕ್ರಮ ಜರುಗಿಸಲಾಗುವುದು ಎಂದು ತಹಶೀಲ್ದಾರ್ ರಶ್ಮಿ ಎಚ್ಚರಿಕೆ ನೀಡಿದ್ದಾರೆ.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪ್ರಿಯದರ್ಶಿನಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್, ಸಿಬ್ಬಂದಿ ಶಶಿಧರ್ ಸಿಂಗ್ ಅಧಿಕಾರಿಗಳ ತಂಡ ಕಾರ್ಯಾಚರಣೆ ಕೈಗೊಂಡಿತ್ತು.

ಸೈಬರ್ ಕೇಂದ್ರಗಳು ಸೀಜ್: ಕೆಲವು ತಿಂಗಳ ಹಿಂದೆ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆಗೆ ಮಹಿಳೆಯರಿಂದ 200 ರಿಂದ 250 ರೂಪಾಯಿವರೆಗೆ ಹೆಚ್ಚುವರಿ ಹಣ ವಸೂಲಿ ಮಾಡುತ್ತಿದ್ದ ರಾಯಚೂರು ಜಿಲ್ಲೆಯ ಮಾನ್ವಿಯ ಮೂರು ಸೈಬರ್ ಕೇಂದ್ರಗಳನ್ನು ಸೀಜ್​ ಮಾಡಲಾಗಿತ್ತು. ಗ್ರಾಮ ಒನ್ ಕೇಂದ್ರಗಳಲ್ಲಿ ಪಾಸ್‌ವಾರ್ಡ್ (ರಹಸ್ಯ ಸಂಖ್ಯೆ) ದುರ್ಬಳಕೆ ಮಾಡಿಕೊಂಡು ನೋಂದಣಿ ಮಾಡಿಕೊಡಲು ಮಹಿಳೆಯರಿಂದ ಹೆಚ್ಚುವರಿ ಹಣ ವಸೂಲಿ ಮಾಡುತ್ತಿದ್ದ ಆರೋಪದಡಿ ಮೂರು ಕಂಪ್ಯೂಟರ್ ಸೆಂಟರ್ ಮೇಲೆ‌ ದಾಳಿ ಮಾಡಿದ ಅಧಿಕಾರಿಗಳು, ಅವುಗಳನ್ನು ಸೀಜ್ ಮಾಡಿದ್ದರು.

ಇದನ್ನೂ ಓದಿ: ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆಗೆ ಮಹಿಳೆಯಿಂದ ಹಣ ವಸೂಲಿ ಆರೋಪ.. ಮಾನ್ವಿಯ 3 ಸೈಬರ್ ಕೇಂದ್ರ ಸೀಜ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.