ETV Bharat / state

ದತ್ತ ಪೀಠಕ್ಕೆ ತೆರಳುತ್ತಿದ್ದ ಬಸ್‌ ಮೇಲೆ ಕಲ್ಲು ತೂರಾಟ ಖಂಡಿಸಿ ಕೋಲಾರ ಬಂದ್​ಗೆ ಕರೆ

ದತ್ತ ಮಾಲಾಧಾರಿಗಳು (Datta devotees) ಸಂಚರಿಸುತ್ತಿದ್ದ ವಾಹನದ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಘಟನೆ ಖಂಡಿಸಿ ಇಂದು ಕೋಲಾರದಲ್ಲಿ ಬಂದ್​ಗೆ ಕರೆ ನೀಡಲಾಗಿದೆ.

Band in Kolar
Band in Kolar
author img

By

Published : Nov 18, 2021, 8:59 AM IST

ಕೋಲಾರ: ಚಿಕ್ಕಮಗಳೂರು ಬಾಬಾಬುಡನ್​ ಗಿರಿಯ ದತ್ತಪೀಠಕ್ಕೆ (Baba budangiri datta peeta) ಹೊರಟಿದ್ದ ಬಸ್‌ ಮೇಲೆ ಕಿಡಿಗೇಡಿಗೆಳು ಕಲ್ಲು ತೂರಾಟ ನಡೆಸಿದ ಘಟನೆಯನ್ನ ಖಂಡಿಸಿ ಇಂದು ಕೋಲಾರ ಬಂದ್​ಗೆ ಕರೆ ನೀಡಲಾಗಿದೆ.

ಇಂದು ನಡೆಯಲಿರುವ ಬಂದ್​​ನಲ್ಲಿ ಪ್ರಮೋದ್ ಮುತಾಲಿಕ್ ಭಾಗವಹಿಸುವ ಸಾಧ್ಯತೆಯಿದ್ದು, ಈ ಹಿನ್ನೆಲೆ ಮುತಾಲಿಕ್ ಜಿಲ್ಲಾ ಪ್ರವೇಶಕ್ಕೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ನಿಷೇಧ ಹೇರಿ ಆದೇಶ ಹೊರಡಿಸಿದ್ದಾರೆ.

ಆದೇಶ ಪ್ರತಿ
ಆದೇಶ ಪ್ರತಿ

ಈ ಹಿಂದೆ ಇಂತಹ ಘಟನೆ ಸಂಭವಿಸಿದಾಗ ಪ್ರಮೋದ್ ಮುತಾಲಿಕ್ ಕೋಮು ಪ್ರಚೋದನಾಕಾರಿ ಭಾಷಣ ಮಾಡಿರುವ ಉದಾಹರಣೆಗಳಿವೆ. ಈ ಕಾರಣದಿಂದ ಪ್ರಮೋದ್ ಮುತಾಲಿಕ್​ಗೆ ನವೆಂಬರ್-18 ರಂದು ಜಿಲ್ಲೆಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಜೊತೆಗೆ ಆಡಿಯೋ, ವಿಡಿಯೋ ಭಾಷಣ ಮಾಡದಂತೆ ಸಹ ನಿರ್ಬಂಧ ಹೇರಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.

ಇದನ್ನೂ ಓದಿ: ಕೋಲಾರ: ದತ್ತಪೀಠಕ್ಕೆ ಹೊರಟಿದ್ದ ಬಸ್‌ಗೆ ಕಿಡಿಗೇಡಿಗಳಿಂದ ಕಲ್ಲು ತೂರಾಟ

ಇನ್ನು ದತ್ತ ಪೀಠಕ್ಕೆ ಹೊರಟಿದ್ದ ಬಸ್​ ಮೇಲೆ ದುಷ್ಕರ್ಮಿಗಳು ನಡೆಸಿದ ದಾಳಿ ಖಂಡನೀಯವಾಗಿದ್ದು, ಸಮುದಾಯದಲ್ಲಿ ಶಾಂತಿ ಕದಡುವ ಕೆಲಸ ನಡೆಯುತ್ತಿದೆ. ಇಂತಹ ಕೃತ್ಯ ನಡೆಸಿದವರನ್ನು ಬಂಧಿಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹಿಂದೂಪರ ಸಂಘಟನೆ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.